ಭಾರತ, ಫೆಬ್ರವರಿ 4 -- ಇತ್ತೀಚೆಗೆ ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್‌ ದರವನ್ನು ಹೆಚ್ಚಿಸಿವೆ. ಗ್ರಾಹಕರು ಕೂಡಾ ಮಾಸಿಕವಾಗಿ ದುಬಾರಿ ರೀಚಾರ್ಜ್‌ ಮಾಡಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ. ಬೆಲೆ ಜಾಸ್ತಿ ಇದ್ದರೂ ಅದರ ಪ್ರಯೋಜನ ಕಡಿಮೆ ಎಂಬಂತಾಗಿದೆ. ನಿಮಗೂ ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ದುಬಾರಿ ಎನಿಸಿದರೆ, ಬಿಎಸ್‌ಎನ್‌ಎಲ್‌ (BSNL) ಕಡೆಯಿಂದ ಉತ್ತಮ ರೀಚಾರ್ಜ್‌ ಯೋಜನೆ ಇದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಬಜೆಟ್ ಸ್ನೇಹಿ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಇದು ಮಾಸಿಕ ರೀಚಾರ್ಜ್‌ ಯೋಜನೆ ಅಲ್ಲ. ಬದಲಾಗಿ ಒಂದು ಸಂಪೂರ್ಣ ವರ್ಷಕ್ಕೆ ಆಗುವ ರೀಚಾರ್ಜ್ ಪ್ಲಾನ್‌ ಇದಾಗಿದೆ.

ಬಿಎಸ್‌ಎನ್‌ಎಲ್‌ನಲ್ಲಿ ಒಂದು ವರ್ಷದವರೆಗೆ ವ್ಯಾಲಿಡಿಟಿ ಇರುವ ರೀಚಾರ್ಜ್‌ ಯೋಜನೆ ಇದೆ. ಇದರ ಬೆಲೆ 2,000 ರೂ.ಗಿಂತ ಕಡಿಮೆ. ಒಮ್ಮೆ ರೀಚಾರ್ಜ್‌ ಮಾಡಿಸಿಕೊಂಡರೆ, 600GB ಇಂಟರ್ನೆಟ್‌ ಮಾತ್ರವಲ್ಲದೆ ದಿನಕ್ಕೆ 100 SMS ಉಚಿತವಾಗಿ ಪಡೆಯಬಹುದು. ಮುಖ್ಯವಾಗಿ ಅನಿಯಮಿತ ಕರೆ ಪ್ರಯೋಜನ ಇದ್ದೇ ಇರುತ್ತದೆ.

ಬ...