Bengaluru, ಏಪ್ರಿಲ್ 18 -- ಬಿಎಸ್‌ಎನ್‌ಎಲ್ ಬಳಕೆದಾರರು ಗಮನಿಸಿ- ಸರ್ಕಾರಿ ಟೆಲಿಕಾಂ ಆಪರೇಟರ್ ಬಿಎಸ್‌ಎನ್‌ಎಲ್ ತನ್ನ ಎರಡು ಅತ್ಯಂತ ಕೈಗೆಟುಕುವ ಯೋಜನೆಗಳ ಮಾನ್ಯತೆಯನ್ನು ಕಡಿಮೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ದೊಡ್ಡ ಆಘಾತವನ್ನು ನೀಡಿದೆ. ಬಿಎಸ್‌ಎನ್‌ಎಲ್ ಈ ಎರಡೂ ಯೋಜನೆಗಳ ಮಾನ್ಯತೆಯನ್ನು 30 ದಿನಗಳವರೆಗೆ ಕಡಿಮೆ ಮಾಡಿದೆ. ಬಿಎಸ್‌ಎನ್‌ಎಲ್ ನ ಈ ಯೋಜನೆಗಳು ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತವೆ. ಬಿಎಸ್‌ಎನ್‌ಎಲ್ ಯಾವ ಯೋಜನೆಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡಿದೆ ಎಂಬ ವಿವರ ಇಲ್ಲಿದೆ.

2 ಯೋಜನೆಗಳು ಇವು ನೋಡಿ- ಬಿಎಸ್‌ಎನ್‌ಎಲ್ 2399 ಮತ್ತು 1499 ರೂ. ಯೋಜನೆಗಳ ಮಾನ್ಯತೆಯನ್ನು ಕಡಿಮೆ ಮಾಡಿದೆ. ಬಿಎಸ್‌ಎನ್‌ಎಲ್‌ನ 2399 ರೂ. ಯೋಜನೆಯು ಈಗ 425 ದಿನಗಳ ಬದಲಿಗೆ 395 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಆದರೆ 1499 ರೂ. ಯೋಜನೆಯ ಮಾನ್ಯತೆಯನ್ನು 365 ದಿನಗಳಿಂದ 336 ದಿನಗಳಿಗೆ ಇಳಿಸಲಾಗಿದೆ.

BSNL 2399 ರೂ. ಯೋಜನೆಯ ಪ್ರಯೋಜನಗಳು-BSNLನ 2399 ರೂ. ಯೋಜನೆಯು BSNLನ ಅತ್ಯಂತ ವಿಶೇಷ ಯೋಜನೆಯಾಗಿದೆ. ಈ...