ಭಾರತ, ಫೆಬ್ರವರಿ 10 -- ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು (PV Sindhu) ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಕಾರಣ ಮುಂಬರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ (Badminton Asia Mixed Team Championship) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದು ಪಂದ್ಯಾವಳಿಯಲ್ಲಿ ಭಾರತದ ಪದಕ ಗೆಲ್ಲುವ ಸಾಧ್ಯತೆಯನ್ನು ಪಣಕ್ಕಿಟ್ಟಿದೆ. ಜನವರಿಯಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಪಿವಿ ಸಿಂಧು, ವಿಯೆಟ್ನಾಂನ ಟಿಎಲ್ ನ್ಗುಯೆನ್ ವಿರುದ್ಧ 32ನೇ ರೌಂಡ್​​ನಲ್ಲಿ ಪರಾಭವಗೊಂಡು ಹೊರಬಿದ್ದಿದ್ದರು.

ಫೆಬ್ರವರಿ 11 ರಿಂದ 16ರ ತನಕ ಪೂರ್ವ ಚೀನಾದ ಕ್ವಿಂಗ್‌ಡಾವೊದಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್​ಗೆ ಭಾರತೀಯ ಶಟ್ಲರ್‌ಗಳು ಈಗಾಗಲೇ ತೆರಳಿದ್ದಾರೆ. ಕಳೆದ ಆವೃತ್ತಿಯ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್​ನಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ 2-3 ಅಂತರದಿಂದ ಸೋತು ಕಂಚಿನ ಪದಕಕ್...