ಭಾರತ, ಜನವರಿ 5 -- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದಶಕದ ಬಳಿಕ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಿದೆ. ಕೆಎಸ್‌ಆರ್‌ಟಿಸಿಯಲ್ಲಿ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿಯೂ ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ. ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಎಂಟಿಸಿ ಬಸ್ ದರ ಏರಿಕೆಗೆ ಸಚಿವ ಸಂಪುಟದಲ್ಲಿ ಗ್ರೀನ್ ಸಿಗ್ನಲ್ ನೀಡಿತ್ತು. ಪರಿಷ್ಕೃತ ದರಗಳು ಇಂದಿನಿಂದಲೇ (ಜವನರಿ 5, ಭಾನುವಾರ) ಜಾರಿಗೆ ಬಂದಿವೆ. ಮೆಜೆಸ್ಟಿಕ್‌ನಿಂದ ನಗರದ ವಿವಿಧ ಪ್ರದೇಶಗಳಿಗೆ ಪ್ರಸ್ತುತ ಇರುವ ಟಿಕೆಟ್ ದರ ಹಾಗೂ ಪರಿಷ್ಕರಣೆಯಾಗಿರುವ ಬಸ್ ಪ್ರಯಾಣದ ದರಗಳ ವಿವರ ಇಲ್ಲಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ದಿಂದ ಕುಮಾರಸ್ವಾಮಿ ಬಡಾವಣೆ, ಬಿಟಿಎಂ ಬಡಾವಣೆ, ಎಜಿಎಸ್ ಲೇಔಟ್, ನಂದಿನಿ ಲೇಔಟ್‌ಗೆ ಹಾಲಿ ಪ್ರಯಾಣ ದರಗಳು 25 ರೂಪಾಯಿ ಇದೆ. ಪರಿಷ್ಕೃತ ಪ್ರಯಾಣ ದರ 28 ರೂಪಾಯಿ ಆಗಲಿದೆ. ಅದೇ ರೀತಿಯಾಗಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣ, ಶಂಕರನಾಗ್ ಬಸ್ ನಿಲ್ದಾಣ, ನೀಲಸಂದ್ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.