ಭಾರತ, ಮಾರ್ಚ್ 19 -- Sunita Williams: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ಭಾರತದ ಸಂಜಾತೆ, ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರು 9 ತಿಂಗಳ ಬಳಿಕ ಸುರಕ್ಷಿತವಾಗಿ ಭೂಮಿಗೆ ವಾಪಸ್ ಆಗಿದ್ದಾರೆ. ಭಾರತೀಯ ಕಾಲಮಾನ ಬುಧವಾರ (ಮಾರ್ಚ್ 19) ಬೆಳಗ್ಗೆ 3.27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಐಎಸ್ಎಸ್ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿದಿದೆ. ಈ ಇಬ್ಬರು ಗಗನಯಾತ್ರಿಗಳು ಒಂದು ವಾರದ ಮಟ್ಟಿಗೆ ಬಾಹ್ಯಾಕಾಶಕ್ಕೆ ತೆರಳಿದ್ದರು. ತಾಂತ್ರಿಕ ದೋಷದಿಂದಾಗಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು. 9 ತಿಂಗಳ ನಂತರ ಭೂಮಿಗೆ ವಾಪಸ್ ಆಗಿದ್ದಾರೆ. 2024ರ ಜೂನ್ ನಲ್ಲಿ ಬಾಹ್ಯಾಕಾಶಕ್ಕೆ ಪ್ರಮಾಣಿಸಿದ್ದರು. ತಾಂತ್ರಿಕ ತೊಂದರೆ ಹಾಗೂ ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದ ಭೂಮಿಗೆ ವಾಪಸ್ ಬರುವುದು ವಿಳಂಬವಾಗಿತ್ತು. ...