ಭಾರತ, ಮಾರ್ಚ್ 14 -- Samosas in Space: ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬ್ಯಾರಿ 'ಬುಚ್' ಇ. ವಿಲ್ಮೋರ್‌ ಅವರು ಭೂಮಿಗೆ ಮರುಳುವುದನ್ನೇ ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಎರಡು ದಿನದ ಮಟ್ಟಿಗೆ ಮುಂದೂಡಲ್ಪಟ್ಟ ಅವರ ಪ್ರಯಾಣ ಇಂದು (ಮಾರ್ಚ್ 14) ಶುರುವಾಗಲಿದ್ದು ಮಾರ್ಚ್‌ 19 ರಂದು ಭೂಮಿಗೆ ತಲುಪಲಿದ್ದಾರೆ. ಹೀಗಾಗಿ ಈ ಹೊತ್ತು ಬಹಳ ಮಹತ್ವದ್ದು. ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತೀಯ ಮೂಲದವರ ಸಾಧನೆ ಗಮನಾರ್ಹ. ಸುನೀತಾ ವಿಲಿಯಮ್ಸ್ ಅವರಂತೆಯೇ ಕಲ್ಪನಾ ಚಾವ್ಲಾ ಅವರು ಕೂಡ ಗಗನಯಾನ ಮಾಡಿದ್ದರು. ಸುನೀತಾ ವಿಲಿಯಮ್ಸ್ ಹಾಗೂ ಕಲ್ಪನಾ ಚಾವ್ಲಾ ಅವರ ನಡುವೆ ಒಂದು ಸಾಮ್ಯತೆ ಇದೆ. ಇಬ್ಬರೂ ಭಾರತೀಯ ಆಹಾರ ಪ್ರಿಯರು ಎಂಬುದು.

ಕಲ್ಪನಾ ಚಾವ್ಲಾ ಅವರು ತಮ್ಮ ಜೀವಮಾನದ ಕನಸನ್ನು 1997ರಲ್ಲಿ ನನಸು ಮಾಡಿಕೊಂಡು, ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಸಂಜಾತೆ ಎಂಬ ಕೀರ್ತಿಗೆ ಭಾಜನರಾದರು. ಒಂದು ವರ್ಷದ ಬಳಿಕ 1998ರಲ್ಲಿ ಸುನೀತಾ ವಿಲಿಯಮ್ಸ್ ಕೂಡ ನಾಸಾ ಗಗನಯಾನಿಯಾಗಿ ಆಯ್ಕೆಯಾದರು. ಹಲವ...