Bengaluru, ಏಪ್ರಿಲ್ 7 -- Bharjari Bachelors Season 2: ಜೀ ಕನ್ನಡದ ವಾರಾಂತ್ಯದ ಎರಡು ರಿಯಾಲಿಟಿ ಶೋಗಳೀಗ ಮಹಾಸಂಗಮದ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ನೀಡುತ್ತಿವೆ. ಸರಿಗಮಪ ಶೋ ಸ್ಪರ್ಧಿಗಳು ಹಾಡಿ ರಂಜಿಸುವುದಷ್ಟೇ ಅಲ್ಲ, ಭರ್ಜರಿ ಬ್ಯಾಚುಲರ್ಸ್‌ ಸ್ಪರ್ಧಿಗಳ ಜತೆ ಸೇರಿ ಡಾನ್ಸನ್ನೂ ಮಾಡಿದ್ದಾರೆ. ಎರಡೂ ಶೋಗಳ ಸ್ಪರ್ಧಿಗಳ ಜತೆಗೆ ತೀರ್ಪುಗಾರರೂ ಕಳೆದ ವಾರಾಂತ್ಯದಲ್ಲಿ ಒಂದೇ ಕಡೆ ಕಾಣಿಸಿಕೊಂಡು ಎಂಜಾಯ್‌ ಮಾಡಿದ್ದಾರೆ. ರೊಮ್ಯಾಂಟಿಕ್‌ ಹಾಡುಗಳ ಮೂಲಕವೇ ಮೈಚಳಿ ಬಿಟ್ಟು ಸ್ಪರ್ಧಿಗಳು ಕುಣಿದಿದ್ದಾರೆ. ಅದರಲ್ಲೂ ಬಾಳು ಬೆಳಗುಂದಿ ಮತ್ತು ಗಗನಾ ಭಾರಿ ಜೋಡಿಯ ಕುಣಿತ ಚರ್ಚೆಗೆ ಕಾರಣವಾಗಿದೆ.

ಭೀಮ ಸಿನಿಮಾದ "ಸೈಕಾಗೋದೆ... ಸೈಕಾದೆ... ಐ ಲವ್‌ ಯೂ ಕಣೇ.. ಐ ಲವ್‌ ಯೂ ಕಣೋ.." ಹಾಡಿನಲ್ಲಿ ಬೋಲ್ಡ್‌ ಆಗಿಯೇ ಬಾಳು ಬೆಳಗುಂದಿ ಮತ್ತು ಗಗನಾ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ಈ ಜೋಡಿಯ ಕುಣಿತಕ್ಕೆ ಸರಿಗಪಮ ಸ್ಪರ್ಧಿಗಳ ಜತೆಗೆ ಭರ್ಜರಿ ಬ್ಯಾಚುಲರ್ಸ್‌ ಶೋನ ಸ್ಪರ್ಧಿಗಳೂ ಹುಬ್ಬೇರಿಸಿದ್ದಾರೆ. ತೀರ್ಪುಗಾರರೂ ಇ...