ಭಾರತ, ಮೇ 14 -- ಮುದ್ದು ಸೊಸೆ ಧಾರಾವಾಹಿ ಕಥೆ: ಮುದ್ದು ಸೊಸೆ ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಹಲವು ಘಟನೆಗಳು ನಡೆದಿವೆ. ವಿದ್ಯಾಗೆ ಭದ್ರ ತಾಳಿ ಕಟ್ಟುವ ಸಮಯಕ್ಕೆ ಪೊಲೀಸರು ಆಗಮಿಸಿ ಈ ಮದುವೆ ನಡೆಯಲು ಸಾಧ್ಯವಿಲ್ಲ ನಿಲ್ಲಿಸಿ ಎನ್ನುತ್ತಾರೆ. ಮದುವೆಗೆ ಹುಡುಗ, ಹುಡುಗಿ ಇಬ್ಬರೂ ಒಪ್ಪಿದ್ದಾರೆ ಆದರೂ ಏಕೆ ಮದುವೆ ನಿಲ್ಲಿಸಬೇಕು ಎಂದು ಶಿವರಾಮೇಗೌಡ ಕೇಳುತ್ತಾನೆ.

ಬಾಲ್ಯ ವಿವಾಹ ಕಾರಣ: ಇದು ಬಾಲ್ಯ ವಿವಾಹ, ಹುಡುಗಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ನೀನು ಮದುವೆ ಮಂಟಪ ಬಿಟ್ಟು ಬರದಿದ್ದರೆ ಬಟ್ಟೆ ಬಿಚ್ಚಿಸಿ ಕರೆದೊಯ್ಯುತ್ತೇನೆ ಎಂದು ಭದ್ರನಿಗೆ ಎಚ್ಚರಿಕೆ ಕೊಡುತ್ತಾರೆ. ಮಗನಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸಿಟ್ಟಾದ ಶಿವರಾಮೇಗೌಡ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡುತ್ತಾನೆ.

ಬಾಲ್ಯ ವಿವಾಹ ಮಾಡುವುದು ದೊಡ್ಡ ತಪ್ಪು. ಅದರ ಜೊತೆಗೆ ಡ್ಯೂಟಿಯಲ್ಲಿದ್ದ ಪೊಲೀಸ್‌ ಆಫೀಸರ್‌ ಮೇಲೆ ಕೈ ಮಾಡಿ ಇನ್ನೂ ದೊಡ್ಡ ತಪ್ಪು ಮಾಡಿದ್ದೀಯ ಇದರ ಪರಿಣಾಮ ಏನು ಅನ್ನೋದನ್ನು ತೋರಿಸುತ್ತೇನೆ ಬಾ...