ಭಾರತ, ಮಾರ್ಚ್ 23 -- ಬಾಲಿವುಡ್‌ ಸ್ಟಾರ್ ನಟ ಸುಶಾಂತ್ ಸಿಂಗ್ ಜೂನ್ 14, 2020ರಂದು ಮುಂಬೈನ ಬಾಂದ್ರಾದಲ್ಲಿ ಸುಶಾಂತ್ ಸಿಂಗ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಸಾಕಷ್ಟು ಜನ ತಮ್ಮ ಪ್ರಿಯ ನಟನನ್ನು ಕಳೆದುಕೊಂಡು ಬೇಸರಗೊಂಡಿದ್ದರು. ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಅನುಮಾನ ಕೂಡ ಎಲ್ಲರಲ್ಲಿ ಮೂಡಿತ್ತು. ಆದರೆ ಈಗ ಅಂತಿಮವಾಗಿ ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಸಿದೆ. ಸುಶಾಂತ್ ಸಿಂಗ್‌ ಸಾವು ಕೊಲೆಯಲ್ಲ ಎಂದು ವರದಿಯನ್ನು ಸಲ್ಲಿಸಲಾಗಿದೆ.

ನಟಿ ರಿಯಾ ಚಕ್ರವರ್ತಿ ಅವರ ವಕೀಲ ಸತೀಶ್ ಮಾನೇಶಿಂಡೆ ಅವರು ಶನಿವಾರ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ ಮುಕ್ತಾಯ ವರದಿಯನ್ನು ಸ್ವಾಗತಿಸಿದ್ದಾರೆ. ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಬಾರಿ ಪರೀಕ್ಷೆಗೆ ಒಳಗಾಗಿದ್ದರು. ರಿಯಾ, ಸುಶಾಂತ್ ಅವರ ಪ್ರೇಯಸಿ ಎಂಬ ಕಾರಣಕ್ಕಾಗಿ ಅವರನ್ನು ಹಲವು ಬಾರಿ ಪ್ರಶ್ನಿಸಲಾಗಿತ್ತು.

ಇದನ್ನೂ ಓದಿ: Kiara Advani: ಟಾಕ್ಸಿಕ್ ಸಿನಿಮಾ ಮ...