Bengaluru, ಏಪ್ರಿಲ್ 8 -- Bollywood Film Industry: ಕರೋನ ಹತ್ತಿರತ್ತಿರ ಎರಡು ವರ್ಷ ಬಾಲಿವುಡ್ ಎನ್ನುವ ಹಣ ಮುದ್ರಿಸುವ ಮಷೀನ್‌ಗೆ ಬೀಗ ಜಡಿದು ಬಿಟ್ಟಿತು. ಅದಾದ ಮೇಲೆ ಅವರ ದುರಾದೃಷ್ಟವೋ ಏನೋ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೆ ಇವೆ ಮತ್ತು ಅದ್ಯಾವ ಘಟನೆಗಳು ಅವರಿಗೆ ಪೂರಕವಾಗಿಲ್ಲ. ಪ್ರತಿ ಬಾರಿ ಚಿತ್ರ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಅದೊಂದು ಅತ್ಯಂತ ದೊಡ್ಡ ಬಲೆಯನ್ನ ಸಮುದ್ರಕ್ಕೆ ಎಸೆದಂತೆ , ಕೋಟ್ಯಂತರ ಹಣವನ್ನ ಬಾಚಿಕೊಳ್ಳುತ್ತಿದ್ದರು. 100ಕೋಟಿ ಕ್ಲಬ್ ಎನ್ನುವುದು ಮಹಾ ಬಕ್ವಾಸ್ , ಏಕೆಂದರೆ 100ಕೋಟಿ ಎನ್ನುವುದು ಮೊತ್ತವೇ ಅಲ್ಲ ಎನ್ನುವಷ್ಟು ತೃಣ. ಇಲ್ಲಿನ ಬ್ಲಾಕ್ ಬಸ್ಟರ್ ಸಿನಿಮಾಗಳು ಕನಿಷ್ಠ ಸಾವಿರ ಕೋಟಿ ಮಾಡುತ್ತವೆ. ಹೆಸರಿಗೆ ಒಂದೆರೆಡು ಸಿನಿಮಾ 1000 ಕೋಟಿ ಮಾಡಿತು ಎನ್ನುತ್ತಾರೆ.

ಸಾಮಾನ್ಯ ಮನುಷ್ಯನಿಗೆ ಹತ್ತಿಪತ್ತು ಸಾವಿರಕ್ಕೆ ನೋಟಿಸ್ ಕಳಿಸುವ ತೆರಿಗೆ ಸಂಸ್ಥೆಯವರದು ಇಂತಹ ವಿಷಯದಲ್ಲಿ ಮಾತ್ರ ದಿವ್ಯಮೌನ. ಗಮನಿಸಿ ಬಾಲಿವುಡ್ ಚಿತ್ರಗಳು ಕನಿಷ್ಠ 2000 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್...