Bengaluru, ಮಾರ್ಚ್ 13 -- Aamir khan on South indian Movies: 2023ರಲ್ಲಿ 'ಜವಾನ್‍', 'ಪಠಾಣ್‍', 'ಅನಿಮಲ್‍' ಮುಂತಾದ ಚಿತ್ರಗಳು ದೊಡ್ಡ ಮಟ್ಟಿಗೆ ಹಿಟ್‍ ಆಗಿ, ಜನ ಚಿತ್ರಮಂದಿರಗಳತ್ತ ವಾಪಸ್ಸು ಬಂದರು ಎನ್ನುವಷ್ಟರಲ್ಲೇ, ಕಳೆದ ವರ್ಷ ಬಾಲಿವುಡ್‍ನಲ್ಲಿ ಸಾಲುಸಾಲು ಚಿತ್ರಗಳು ಸೋತು, ಸಾಕಷ್ಟು ನಷ್ಟ ಅನುಭವಿಸಿದವು. ಅದೆಲ್ಲಕ್ಕಿಂತ ಹೆಚ್ಚಾಗಿ ಮತ್ತೆ ಚಿತ್ರಮಂದಿರಗಳಲ್ಲಿ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಇಷ್ಟಕ್ಕೂ ಇದಕ್ಕೆ ಕಾರಣವೇನು? ಎಂಬ ಪ್ರಶ್ನೆ ಬರುವುದು ಸಹಜ. ಬಾಲಿವುಡ್‍ ತನ್ನ ಬೇರುಗಳನ್ನು ಮರೆತಿರುವುದೇ ಇದಕ್ಕೆಲ್ಲಾ ಮುಖ್ಯ ಕಾರಣ ಎಂದು ಆಮೀರ್ ಖಾನ್‍ ಹೇಳಿದ್ದಾರೆ.

ಇತ್ತೀಚೆಗೆ ಒಂದು ಸಮಾರಂಭದಲ್ಲಿ ಹಿಂದಿಯ ಜನಪ್ರಿಯ ಕಥೆಗಾರ ಮತ್ತು ಗೀತರಚನೆಕಾರ ಜಾವೇದ್‍ ಅಖ್ತರ್ ಜೊತೆಗಿನ ಸಂವಾದದಲ್ಲಿ, ದಕ್ಷಿಣದ ಚಿತ್ರಗಳು 700-800 ಕೋಟಿ ರೂ ಗಳಿಕೆ ಮಾಡುವಾಗ, ಬಾಲಿವುಡ್‍ ಚಿತ್ರಗಳು ಯಾಕೆ ಹಿಂದೆ ಬೀಳುತ್ತಿವೆ ಎಂಬ ಪ್ರಶ್ನೆಯನ್ನು ಜಾವೇದ್‍ ಅಖ್ತರ್, ಆಮೀರ್ ಮುಂದಿಟ್ಟರು.

ಈ ಪ್ರಶ್ನೆಗೆ ಉತ್ತರಿಸಿದ ...