Bengaluru, ಫೆಬ್ರವರಿ 11 -- ಸಿನಿಸ್ಮೃತಿ ಅಂಕಣ: ಹಿಂದಿ ಚಿತ್ರರಂಗದ ಸಾಕಷ್ಟು ನಟರ ಮಕ್ಕಳ, ಸಂಬಂಧಿಕರು ಈಗಾಗಲೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. 70ರ ದಶಕದಲ್ಲಿ ರಾಜ್‍ ಕಪೂರ್ ಮಕ್ಕಳಾದ ರಣಧೀರ್ ಕಪೂರ್ ಮತ್ತು ರಿಷಿ ಕಪೂರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 80ರ ದಶಕದಲ್ಲಿ ಧರ್ಮೇಂದ್ರ ಮಗ ಸನ್ನಿ ಡಿಯೋಲ್‍, ಸುನೀಲ್‍ ದತ್ ಮಗ ಸಂಜಯ್‍ ದತ್‍, ರಾಜೇಂದ್ರ ಕುಮಾರ್ ಮಗ ಕುಮಾರ್ ಗೌರವ್‍, ರಾಜ್‍ ಕಪೂರ್ ಮಗ ರಾಜೀವ್ ಕಪೂರ್, ದೇವ್ ಆನಂದ್‍ ಮಗ ಸುನೀಲ್ ಆನಂದ್‍, ಶಶಿ ಕಪೂರ್ ಮಗಳು ಸಂಜನಾ ಕಪೂರ್ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ಸಂಖ್ಯೆಯಲ್ಲಿ ಸ್ಟಾರ್ ಮಕ್ಕಳು ಮತ್ತು ಸಂಬಂಧಿಕರು ಚಿತ್ರರಂಗಕ್ಕೆ ಬಂದು ಹೋಗಿದ್ದಾರೆ. ಕೆಲವರು ಇಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿದರೆ, ಇನ್ನೂ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಮಕ್ಕಳ ಪ್ರಾಬಲ್ಯ ಜಾಸ್ತಿ ಇರುವುದರಿಂದಲೇ, ಕೆಲವು ವರ್ಷಗಳ ಹಿಂದೆ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ದೊಡ್ಡ ಕೂಗು ಕೇಳಿ...