ಭಾರತ, ಏಪ್ರಿಲ್ 21 -- ಬಾಲಿವುಡ್ ನಟಿ ದಿಶಾ ಪಟಾನಿ ಸಹೋದರಿ ಖುಶ್ಬೂ ಪಟಾನಿ ಮಾಜಿ ಸೈನ್ಯಾಧಿಕಾರಿ. ಈಕೆ ಮಾಡಿರುವ ಮಹತ್ಕಾರ್ಯವೊಂದು ಈ ಸಖತ್ ವೈರಲ್ ಆಗಿದೆ, ಮಾತ್ರವಲ್ಲ ಹಲವರು ಆಕೆಯನ್ನು ಶ್ಲಾಘಿಸುತ್ತಿದ್ದಾರೆ. ಬರೇಲಿಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ಒಂಟಿಯಾಗಿದ್ದ ಮಗುವನ್ನು ಆಕೆ ರಕ್ಷಿಸಿದ್ದಾರೆ. ಅಲ್ಲದೇ ಈ ಮಗುವಿನ ಪೋಷಕರನ್ನು ಹುಡುಕಿ ಮಗುವನ್ನು ಅವರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ತಾವು ಮಗುವನ್ನು ರಕ್ಷಿಸಿರುವ ವಿಡಿಯೊವನ್ನು ಖುಶ್ಬೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಖುಶ್ಬೂ ಮಾಡಿದ ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ದಿಶಾ ಪಟಾನಿ ಕೂಡ ಸಹೋದರಿಯನ್ನು ಹೊಗಳಿದ್ದು, ನೀನು ರಿಯಲ್ ಲೈಫ್ ಹೀರೊ ಎಂದು ಹೊಗಳಿದ್ದಾರೆ.

ಭಾನುವಾರ (ಏಪ್ರಿಲ್ 20) ಬರೇಲಿಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ತಮಗೆ ಮಗು ಸಿಕ್ಕಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದರು ಖುಶ್ಬೂ. ವಿಡಿಯೊದಲ್ಲಿ ಮಗುವನ್ನು ರಕ್ಷಿಸಿರುವ ಅವರು ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ. ನೀವ...