Bengaluru, ಮಾರ್ಚ್ 8 -- Anurag Kashyap quits Bollywood: ಬಾಲಿವುಡ್‌ನಲ್ಲಿ ಗುರುತಿಸಿಕೊಂಡ ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌, ನಟನಾಗಿಯೂ ಗಮನ ಸೆಳೆದಿದ್ದಾರೆ. ಹಿಂದಿ ಸಿನಿಮಾಗಳ ನಿರ್ದೇಶನ ಮತ್ತು ನಟನೆಯಲ್ಲಿಯೂ ಭಾಗಿಯಾಗಿದ್ದ ಇದೇ ನಟ, ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದಿ ಸಿನಿಮಾರಂಗ ಇತ್ತೀಚಿನ ದಿನಗಳಲ್ಲಿ ತುಂಬ ವಿಷಕಾರಿಯಾಗಿದೆ. ಹಾಗಾಗಿ ನಾನು ಬಾಲಿವುಡ್‌ನಿಂದ ಹಿಂದೆ ಸರಿಯುತ್ತಿದ್ದೇನೆ ಎನ್ನುವ ಮೂಲಕ ಶಾಕಿಂಗ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ.

"ನಾನು ಮುಂಬೈ ತೊರೆದಿದ್ದೇನೆ. ನಾನು ಇಲ್ಲಿನ (ಬಾಲಿವುಡ್‌) ಸಿನಿಮೋದ್ಯಮದ ಜನರಿಂದ ದೂರವಿರಲು ಬಯಸುತ್ತೇನೆ. ಈ ಇಂಡಸ್ಟ್ರಿ ತುಂಬಾ ವಿಷಕಾರಿಯಾಗಿದೆ. ಎಲ್ಲರೂ ಅವಾಸ್ತವಿಕ ಗುರಿಗಳನ್ನು ಬೆನ್ನಟ್ಟುತ್ತಿದ್ದಾರೆ. 500 ಕೋಟಿ, 800 ಕೋಟಿ ಬಜೆಟ್‌ನ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಹಾಗಾಗಿ ಸೃಜನಶೀಲ ವಾತಾವರಣವು ಇಲ್ಲವಾಗಿದೆ" ಎಂದಿದ್ದಾರೆ.

"ನಗರವು ಕೇವಲ ಒಂದು ರಚನೆಯಲ್ಲ, ಅದು ಜನರಿಂದ ಕೂಡಿದ ಪ್ರದೇಶ. ಇಲ್ಲಿನ (ಬಾಲಿವುಡ್‌) ಜನ ನಿಮ್ಮನ್ನು...