ಭಾರತ, ಏಪ್ರಿಲ್ 5 -- Instagram ಬಳಕೆದಾರ ಪ್ರಣವ್ ವಿಜಯನ್ ಎಂಬುವವರು AI ಸಹಾಯದಿಂದ ಬಾಲಿವುಡ್ ನಟಿಯರ ಮೂರು ಕಾಲಘಟ್ಟದ ಫೋಟೋಗಳನ್ನು ಸೃಷ್ಟಿ ಮಾಡಿದ್ದಾರೆ. ಹಿಂದಿ ನಟಿಯರು ಬಾಲ್ಯದಲ್ಲಿ ಹೇಗಿದ್ದರು, ಈಗ ಹೇಗಿದ್ದಾರೆ, ವಯಸ್ಸಾದ ಮೇಲೆ ಹೇಗೆ ಕಾಣಿಸಲಿದ್ದಾರೆ ಎಂಬುದನ್ನು AI ಮೂಲಕ ಕ್ರಿಯೆಟ್‌ ಮಾಡಿದ್ದಾರೆ. ಈ ಫೋಟೋಗಳನ್ನು ಶೇರ್‌ ಮಾಡಿಕೊಂಡು, ಯಾರು ಹೇಗಿದ್ದಾರೆ ಕಾಮೆಂಟ್‌ ಮಾಡಿ ಎಂದೂ ಹೇಳಿದ್ದಾರೆ. ಅವರ ಪೋಸ್ಟ್‌ಗೆ ಬಗೆಬಗೆ ಕಾಮೆಂಟ್ಸ್‌ ಸಂದಾಯವಾಗಿವೆ.

ವಯಸ್ಸಾದರೂ ಸಹ ದೀಪಿಕಾ ಪಡುಕೋಣೆ ಅದ್ಭುತವಾಗಿ ಕಾಣುತ್ತಾರೆ. ಈ ಚಿತ್ರಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು, "ಭವಿಷ್ಯದಲ್ಲಿ ತಮ್ಮ ಮಗಳು ದುವಾ ಜೊತೆ ದೀಪಿಕಾ" ಎಂದು ಕೆಲವರು ಈ ಫೋಟೋಕ್ಕೆ ಕಾಮೆಂಟ್‌ ಹಾಕಿದ್ದಾರೆ.

ವಿದ್ಯಾ ಬಾಲನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಎಐ ಫೋಟೋದಲ್ಲಿ ಕಂಡಿದ್ದು ಹೀಗೆ.

ಆಲಿಯಾ ಭಟ್ ಅವರ ಎಐ ಫೋಟೋ ಎಲ್ಲರನ್ನು ಸೆಳೆದಿದೆ. ಬಾಲ್ಯದಲ್ಲಿ ಆಲಿಯಾ ಹೇಗಿದ್ದರು ಎಂಬುದನ್ನೂ ನೀವಿಲ್ಲಿ ಕಾಣಬಹುದು.

ಬಾಲಿವುಡ್‌ ಬೇಬೊ ಕರೀನಾ ಕಪೂರ್‌ ...