Bengaluru, ಮೇ 28 -- ಹೊಂಬಾಳೆ ಫಿಲಂಸ್ ಭಾರತೀಯ ಚಿತ್ರರಂಗದ ಕಂಡ ಸ್ಟಾರ್‌ ನಟ ಹೃತಿಕ್ ರೋಷನ್ ಅವರೊಂದಿಗೆ ಹೊಸ ಚಿತ್ರವೊಂದನ್ನು ಘೋಷಿಸಿದೆ. ಈ ಮೂಲಕ, ಕನ್ನಡ ನೆಲದಿಂದ ಜಾಗತಿಕ ರಂಗಕ್ಕೆ ತಮ್ಮ ಪಯಣವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಸ್ಯಾಂಡಲ್‌ವುಡ್‌ನಲ್ಲಿ ಬೇರು ಬಿಟ್ಟು, ಪಕ್ಕದ ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ ಹೊಂಬಾಳೆ ಫಿಲಂಸ್‌. ಇದೀಗ ಇದೇ ಸಿನಿಮಾ ನಿರ್ಮಾಣ ಸಂಸ್ಥೆ, ಬಾಲಿವುಡ್‌ನತ್ತ ಪಯಣ ಬೆಳೆಸಿದೆ.

ಕನ್ನಡದಲ್ಲಿ ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಈಗ ಹೃತಿಕ್ ರೋಷನ್‌ ನಟನೆಯ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ ನೀಡುವಲ್ಲಿ ಬದ್ಧವಾಗಿರುವ ಹೊಂಬಾಳೆ, ಸಲಾರ್‌ ಮೂಲಕ ಟಾಲಿವುಡ್‌ಗೆ, ಧೂಮಂ ಮೂಲಕ ಮಾಲಿವುಡ್‌ಗೆ ರಘುತಾತ ಮೂಲಕ ಕಾಲಿವುಡ್‌ ಸಿನಿಮಾ ನಿರ್ಮಾಣ ಮಾಡಿತ್ತು.

ಇದೀಗ ಹೃತಿಕ್ ...