ಭಾರತ, ಮಾರ್ಚ್ 17 -- ಇತ್ತೀಚೆಗೆ ಅಂತರಾರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವದಾದ್ಯಂತ ಆಚರಿಸಿದ್ದೇವೆ. ಮಹಿಳಾ ದಿನದ ಆಚರಣೆಯ ಧ್ಯೇಯವಾಕ್ಯವು ಎಲ್ಲರಿಗೂ ಸಮಾನ ಹಕ್ಕುಗಳು, ಅಧಿಕಾರ ಮತ್ತು ಅವಕಾಶದ ಭರವಸೆಯೊಂದಿಗೆ ಮಹಿಳೆಯ ಸ್ಥಾನಮಾನವನ್ನು ಎತ್ತರಿಸುವ ಭಾವವನ್ನು ಹೊಂದಿದೆ. ವಿಶ್ವದೆಲ್ಲಡೆಯಂತೆ ಭಾರತದಲ್ಲಿಯೂ ಮಹಿಳೆಯರು ಶಿಕ್ಷಣ, ರಾಜಕೀಯ, ಮಾಧ್ಯಮ, ಕಲೆ, ಸಾಂಸ್ಕೃತಿಕ, ಸೇವಾ ವಿಭಾಗಗಳು, ವಿಜ್ಞಾನ ಮತ್ತು ತಾಂತ್ರಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮುoಚೂಣಿಯಲ್ಲಿದ್ದು ದಕ್ಷತೆ ಮೆರೆದಿದ್ದಾರೆ.

ಭಾರತೀಯ ಸಂಸ್ಕೃತಿ ಹಿಂದಿನಿಂದಲೂ ಮಹಿಳೆಗೆ ದೇವರು ಮತ್ತು ಗುರುವಿನ ಸ್ಥಾನಮಾನ ನೀಡಿ ಗೌರವಿಸಿದೆ. ಭಾರತ ಸ್ವಾತಂತ್ರ್ಯಾ ನಂತರ ತನ್ನ ಸಂವಿಧಾನದಲ್ಲಿ ಮಹಿಳೆಗೆ ಪುರುಷನಷ್ಟೇ ಸಮಾನತೆಯನ್ನು ಸ್ವಾಭಾವಿಕವಾಗಿ ಕಾನೂನಾತ್ಮಕವಾಗಿ ಕಲ್ಪಿಸಿಕೊಟ್ಟಿರುವುದರ ಜೊತೆಗೆ ಮಹಿಳೆಯರಿಗೆ ಸೂಕ್ತವಾದ ಮತ್ತು ಮಾನವೀಯತೆಯಿoದ ಕೂಡಿದ ಕೆಲಸದ ವಾತಾವರಣವನ್ನೂ ಖಚಿತಪಡಿಸುತ್ತದೆ. ಆದರೂ ಕಾರ್ಯಕ್ಷೇತ್ರದಲ್ಲಿ ಮಹಿಳೆ ಮುನ್ನುಗ್ಗುತ್ತಿರುವ ಮಹಿಳೆಯ ಮೇ...