ಭಾರತ, ಫೆಬ್ರವರಿ 21 -- Himalayan griffon vulture: ಬಾನಲ್ಲಿ ಹಾರಾಟ ನಡೆಸಿದ್ದ ಭಾರಿ ಗಾತ್ರದ ಪಕ್ಷಿಯೊಂದು ನಿತ್ರಾಣಗೊಂಡು ನೆಲಕ್ಕೆ ಬಿದ್ದಿದೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತತ್‌ಕ್ಷಣವೇ ಸ್ಥಳಕ್ಕೆ ಆಗಮಿಸಿದ್ದರು. ಪಕ್ಷಿ ತಜ್ಞರು ಅದರ ಗಾತ್ರ ನೋಡಿ ತಳಿ ಯಾವುದೆಂದು ಗುರುತಿಸಿ ದಂಗಾಗಿದ್ದಾರೆ. ಅವಸಾನದ ಅಂಚಿನಲ್ಲಿರುವ ಹಿಮಾಲಯದ ದೊಡ್ಡ ರಣಹದ್ದು (ಹಿಮಾಲಯನ್ ಗ್ರಿಫೋನ್ ವಲ್ಚರ್) ಅದು ಎಂದು ಗುರುತಿಸಿದ ಅವರು ಅದನ್ನು ಸಂರಕ್ಷಿಸುವುದಕ್ಕೆ ಅಗತ್ಯ ಕ್ರಮ ಕೈಗೊಂಡರು.

ಬಾರಾಬಂಕಿಯ ದೇವಾ ಅರಣ್ಯ ವಲಯದ ಧನ್ನಗ್ ತೀರ್ಥ ಪ್ರದೇಶದಲ್ಲಿ ಗಾಯಗೊಂಡ ಈ ಹಿಮಾಲಯದ ದೊಡ್ಡ ರಣಹದ್ದು ಕಾಣಸಿಕ್ಕಿದೆ. ಬಹುತೇಕ ವಿದ್ಯುತ್ ತಂತಿ ತಗುಲಿ ಗಾಯಗೊಂಡು ಬಿದ್ದಂತೆ ಕಂಡುಬಂದಿದೆ. ಅಪರೂಪದ ಈ ರಣಹದ್ದು ಕಾಣಸಿಕ್ಕಿರುವ ಬಗ್ಗೆ ಅರಣ್ಯಾಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಾರಾಬಂಕಿ ಜಿಲ್ಲೆಯ ವಿವಿಧೆಡೆ ಬೇರೆ ಬೇರೆ ಜಾತಿಯ ರಣಹದ್ದುಗಳು ಕಾಣಸಿಗುತ್ತವೆ. ಅವುಗಳನ್ನು ಅ...