Bengaluru, ಜನವರಿ 27 -- ಮೊಟ್ಟೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಮೊಟ್ಟೆ ತಿನ್ನುವಂತೆ ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳು, ಪ್ರೋಟೀನ್, ಜೀವಸತ್ವ, ಖನಿಜಗಳಿವೆ. ಅವು ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತ. ಪ್ರೋಟೀನ್ ಸಮೃದ್ಧ ಆಹಾರಕ್ಕಾಗಿ ಮೊಟ್ಟೆ ತಿನ್ನುವುದು ಬಹಳ ಪ್ರಯೋಜನಕಾರಿಯಾಗಿದೆ. ಮೊಟ್ಟೆಯಿಂದ ವಿವಿಧ ಬಗೆಯ ಖಾದ್ಯ ತಯಾರಿಸಬಹುದು. ಮೊಟ್ಟೆ ಬಿರಿಯಾನಿ, ಮೊಟ್ಟೆ ಆಮ್ಲೆಟ್, ಮೊಟ್ಟೆ ಸಾಂಬಾರ್, ಮೊಟ್ಟೆ ಘೀ ರೋಸ್ಟ್ ಇತ್ಯಾದಿ ಖಾರ (ಮಸಾಲೆಯುಕ್ತ) ಖಾದ್ಯಗಳನ್ನು ತಿಂದಿರಬಹುದು. ಮೊಟ್ಟೆಯಿಂದ ಸಿಹಿ ಭಕ್ಷ್ಯವನ್ನು ಕೂಡ ತಯಾರಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಟ್ಟೆಯ ಸಿಹಿ ಭಕ್ಷ್ಯ ತಯಾರಿಸುವುದು ತುಂಬಾನೇ ಸುಲಭ, ಇಲ್ಲಿದೆ ರೆಸಿಪಿ.

ಬೇಕಾಗುವ ಸಾಮಗ್ರಿಗಳು: ಹಾಲು- 1 ಲೀಟರ್, ಮೊಟ್ಟೆ- 6, ಸಕ್ಕರೆ- 200 ಗ್ರಾಂ, ತುಪ್ಪ- ಅಗತ್ಯಕ್ಕೆ ತಕ್ಕಷ್ಟು, ಬಾದಾಮಿ- 100 ಗ್ರಾಂ, ಕೇಸರಿ- 1, ಜೇನುತುಪ್ಪ- 1 ಚಮಚ, ಏಲಕ್ಕಿ ಪುಡಿ- 1 ಚಮಚ.

ಇದನ್ನೂ ಓದಿ: ಬಾಯಲ್ಲಿ ...