ಭಾರತ, ಮೇ 15 -- ಮಾವಿನ ಸೀಸನ್‌ ಅಂತ್ಯವಾಗುವ ಕಾಲ ಹತ್ತಿರದಲ್ಲಿದೆ. ನೀವು ಮಾವಿನ ಹಣ್ಣಿನ ರುಚಿಯನ್ನು ಸವಿಯೋದು ಮಾತ್ರವಲ್ಲ, ಮಾವಿನ ಹಣ್ಣಿನಿಂದ ತಯಾರಿಸುವ ಖಾದ್ಯಗಳ ರುಚಿಯನ್ನೂ ನೋಡಬೇಕು. ಮಾವಿನ ಹಣ್ಣಿನ ಖಾದ್ಯಗಳು ಒಂದಕ್ಕಿಂತ ಒಂದು ಸೂಪರ್‌ ಆಗಿರುತ್ತೆ. ಮಾವಿನ ಹಣ್ಣಿನ ಸೀಸನ್‌ ಮುಗಿಯುವ ಮುನ್ನ ಅದರಲ್ಲೂ ಬೇಸಿಗೆಯಲ್ಲಿ ತಪ್ಪದೇ ಸವಿಯಬೇಕಾದ ಮಾವಿನ ಹಣ್ಣಿನ 7 ಖಾದ್ಯಗಳ ರೆಸಿಪಿ ಇಲ್ಲಿದೆ.

ಮಾವಿನ ಹಣ್ಣಿನ ಸ್ಮೂಥಿಬೇಕಾಗುವ ಸಾಮಗ್ರಿಗಳು: ಕಳಿತ ಮಾವಿನ ಹಣ್ಣು - 1, ಮೊಸರು - 1 ಕಪ್‌, ಜೇನುತುಪ್ಪ - ಅಗತ್ಯವಿದ್ದರೆ, ಐಸ್‌ ಕ್ಯೂಬ್‌ಗಳು ತಯಾರಿಸುವ ವಿಧಾನ: ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ರಾಶಿ ನುಣ್ಣಗೆ ರುಚಿ, ಇದನ್ನು ಥಂಡಿ ಇರುವಾಗಲೇ ಕುಡಿಯುವುದು ಉತ್ತಮ.

ಆಮ್‌ ಪನ್ನಾ ತಯಾರಿಸುವ ವಿಧಾನ: ಮಾವಿನ ಕಾಯಿ - 2, ನೀರು - 4 ಕಪ್‌, ಹುರಿದ ಜೀರಿಗೆ ಪುಡಿ - 1 ಚಮಚ, ಸಕ್ಕರೆ ಅಥವಾ ಬೆಲ್ಲ - 2 ಟೇಬಲ್‌ ಚಮಚ, ಪುದಿನಾ ಎಲೆಗಳು ತಯಾರಿಸುವ ವಿಧಾನ: ಮಾವಿನ ಕಾಯಿಗಳನ್ನು ಮೃದುವಾಗುವವರೆಗೂ ಬೇಯಿ...