ಭಾರತ, ಏಪ್ರಿಲ್ 14 -- ಭಾರತದ ಮೊದಲ ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ "ಡಾಕ್ಟರ್ ಆಫ್ ಆಲ್ ಸೈನ್ಸ್" ಪದವಿ ಪಡೆದ ಏಕೈಕ ವ್ಯಕ್ತಿ. ಬಿ. ಆರ್. ಅಂಬೇಡ್ಕರ್ ಅವರ ಸಾಧನೆಗಳು ಮತ್ತು ಕೊಡುಗೆಗಳ ಬಗ್ಗೆ ವಿವರವಾಗಿ ಪಲ್ಲವಿ ಇಡೂರ್ ಅವರು ಹಂಚಿಕೊಂಡ ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ. ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಷಯವನ್ನು ನಾವಿಲ್ಲಿ ಯಥಾವತ್ತಾಗಿ ಪ್ರಕಟಿಸಿದ್ದೇವೆ.

ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ 8 ವರ್ಷದ ಕಾಲಾವಧಿಯ ಎಕನಾಮಿಕ್ಸ್ ಓದುವಾಗ ದಿನದಲ್ಲಿ ಸತತ 21ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಟ್ಟು ಕೇವಲ 2ವರ್ಷ 3ತಿಂಗಳಲ್ಲಿ ಎಕನಾಮಿಕ್ಸ್ ಅಧ್ಯಯನ ಮುಗಿಸಿ, ಭಾರತದ ಮೊಟ್ಟ ಮೊದಲ ವಿದೇಶದಲ್ಲಿ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪಡೆದವರೆಂಬ ಗರಿಮೆಯನ್ನು ತನ್ನದಾಗಿಸಿಕೊಂಡ, ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ "ಡಾಕ್ಟರ್ ಆಫ್ ಆಲ್ ಸೈನ್ಸ್"(Doctor of All Science) ಅನ್ನುವ ಅತ್ಯುನ್ನತ ಗೌರವಕ್ಕೆ ಪಾತ್ರರಾಗ...