ಭಾರತ, ಮಾರ್ಚ್ 15 -- ಮಾರ್ಚ್ 16 ರಿಂದ ಪಾಕಿಸ್ತಾನ ಕ್ರಿಕೆಟ್ ತಂಡವು 5 ಪಂದ್ಯಗಳ ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಸೆಣಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ, ಟಿ20ಐ ಸರಣಿಯಲ್ಲಿ ಹೊಸ ಆರಂಭ ಪಡೆಯಲು ಯತ್ನಿಸುತ್ತಿದೆ. ಆ ಮೂಲಕ 2026ರ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದೆ. ಐಸಿಸಿ ಈವೆಂಟ್ ಅನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ಅಡಿಪಾಯಕ್ಕೆ ಮುಂದಾಗಿದೆ.

ಈಗಾಗಲೇ ದಿಟ್ಟ ಕ್ರಮ ಕೈಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ದಿಟ್ಟ ಕ್ರಮಗಳನ್ನೂ ಕೈಗೊಂಡಿದೆ. ಹಿರಿಯ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಟಿ20ಐ ಫಾರ್ಮೆಟ್​ನಿಂದ ಹೊರಗಿಟ್ಟು ಅಚ್ಚರಿ ಮೂಡಿಸಿದೆ. ಇವರು ಮಾತ್ರವಲ್ಲ, ಮೊಹಮ್ಮದ್ ಹಸ್ನೈನ್, ಸೈಮ್ ಅಯೂಬ್, ಸುಫಿಯಾನ್ ಮೋಕಿಮ್ ಮತ್ತು ತಯ್ಯಬ್ ತಾಹಿರ್ ಅವರನ್ನೂ ಟಿ20ಯಿಂದ ಕೈಬಿಡಲಾಗಿದೆ. ಸಲ್ಮಾನ್ ಅಲಿ ಆಘಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದರೆ, ಶದಾಬ್ ಖಾನ್ ಉಪನಾಯಕನಾಗ...