ಭಾರತ, ಫೆಬ್ರವರಿ 23 -- ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್‌ ತಂಡವು ದುಬೈನಲ್ಲಿ ಆಡುತ್ತಿದೆ. ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕ್‌ ನಾಯಕ ಮೊಹಮ್ಮದ್‌ ರಿಜ್ವಾನ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಪಂದ್ಯದಲ್ಲಿ ಬೌಲಿಂಗ್‌ ಆರಂಭಿಸಿದ ಟೀಮ್‌ ಇಂಡಿಯಾ, ಆರಂಭದಲ್ಲೇ ಮೇಲುಗೈ ಸಾಧಿಸಿತು. ಸ್ಟಾರ್ ಬ್ಯಾಟರ್‌ ಬಾಬರ್ ಅಜಮ್ ಅವರನ್ನು ಔಟ್ ಮಾಡುವ ಮೂಲಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ರೋಹಿತ್‌ ಶರ್ಮಾ ಪಡೆಯ ವಿರುದ್ಧ ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಬಾಬರ್, ಭಾರತದ ವಿರುದ್ಧ ಉತ್ತಮ ಲಯದಲ್ಲಿದ್ದರು. ಐದು ಬೌಂಡರಿ ಸಹಿತ 24 ಎಸೆತಗಳಲ್ಲಿ 23 ರನ್ ಗಳಿಸಿದರು.

ಕಿವೀಸ್‌ ವಿರುದ್ಧ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಂದ ಬಾಬರ್ ಅಜಮ್‌ ತೀವ್ರ ಟೀಕೆಗೆ ಗುರಿಯಾಗಿದ್ದರು. ಬೃಹ...