Bengaluru, ಮೇ 26 -- ಸತತ ಮಳೆಯ ಕಾರಣ ಬಾಗಲಕೋಟೆ ಜಿಲ್ಲೆ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಜಲಪಾತಗಳು ಮೈದುಂಬಿ ಹರಿಯತೊಡಗಿವೆ. ಮುಂಗಾರು ಪೂರ್ವದಲ್ಲೇ ಅಂದರೆ ಬೇಸಿಗೆಯಲ್ಲೇ ಪ್ರವಾಸಿಗರಿಗೆ ಜಲಪಾತ ದರ್ಶನವಾಗಿದೆ. ಬಾನೆತ್ತರದಿಂದ ಭುವಿಗೆ ಧುಮುಕುತ್ತಿರುವಂತೆ ಭಾಸವಾಗುವ ಈ ಜಲಸುಂದರಿಯೇ ಹುಲಿಗೆಮ್ಮ ಕೊಳ್ಳ ಜಲಪಾತ.
ಬಾದಾಮಿ ತಾಲೂಕು ಬಿಎನ್ ಜಾಲಿಹಾಳ ಗ್ರಾಮದಿಂದ 2 ಕಿಮೀ ದೂರ ಇರುವ ಬೆಟ್ಟದ ಬಳಿ ಇದೆ ಹುಲಿಗೆಮ್ಮ ಕೊಳ್ಳ ಜಲಪಾತ.
ಬಾದಾಮಿಯಿಂದ 20 ಕೀ ಮೀಟರ್ ದೂರದಲ್ಲಿರುವ ಈ ಪ್ರದೇಶವು ಇತಿಹಾಸ ಪ್ರಸಿದ್ಧ ಕ್ಷೇತ್ರವೂ ಹೌದು.
ಸತತ ಮಳೆಯ ಕಾರಣ ಬೆಟ್ಟದ ಮೇಲೆ ಮಳೆ ನೀರು ತುಂಬಿಕೊಂಡು ಅಲ್ಲಿಂದ 100 ಅಡಿ ಕೆಳಕ್ಕೆ ದುಮ್ಮಿಕ್ಕುವ ದೃಶ್ಯ ಮನೋಹರವಾಗಿದ್ದು, ಪ್ರವಾಸಿಗರ ನೋಟ ಸೆಳೆದಿದೆ.
ಬಾನೆತ್ತರದಿಂದ ಭುವಿಗೆ ಧುಮುಕುವ ಜಲಧಾರೆ ನೋಡುವಾಗ ಅದರ ನೊರೆ ದೂರಕ್ಕೆ ಹಾಲಿನ ನೊರೆಯಂತೆ ಭಾಸವಾಗುತ್ತದೆ. ಸ್ವಲ್ಪ ಬಿಸಿಲು ಬಿದ್ದರಂತೂ ಕಾಮನ ಬಿಲ್ಲಿನ ದರ್ಶನವೂ ಉಂಟು.
ಹುಲಿಗೆಮ್ಮ ಕೊಳ್ಳವು ಚಾಲುಕ್ಯರ ಕಾಲದಲ್ಲಿ ಖಜಾನೆ ಕೇಂದ...
Click here to read full article from source
To read the full article or to get the complete feed from this publication, please
Contact Us.