Bengaluru, ಫೆಬ್ರವರಿ 16 -- ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಜನರು ಇಂದು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ತರಕಾರಿ, ಹಣ್ಣು, ಹಾಲು ಹೀಗೆ ಸಮತೋಲಿತ ಆಹಾರದತ್ತ ಒಲವು ತೋರುತ್ತಿದ್ದಾರೆ. ಹಾಲು ಕ್ಯಾಲ್ಸಿಯಂನ ಪ್ರಾಥಮಿಕ ಮೂಲವಾಗಿರುವುದರಿಂದ, ಮೂಳೆಯ ಆರೋಗ್ಯಕ್ಕೆ ಅತ್ಯಗತ್ಯವಾಗಿರುವುದರಿಂದ, ಸಸ್ಯ ಆಧಾರಿತ ಆಯ್ಕೆಗಳು ಅದೇ ಮಟ್ಟದ ಪೋಷಣೆಯನ್ನು ಒದಗಿಸಬಹುದೇ ಎಂಬುದು ಈಗ ಹುಟ್ಟುಹಾಕಿರುವ ಪ್ರಶ್ನೆ. ಅಂತಹ ಒಂದು ಪರ್ಯಾಯವೆಂದರೆ ಬಾದಾಮಿ ಹಾಲು. ಬಾದಾಮಿಯನ್ನು ರುಬ್ಬಿ ನೀರಿನಲ್ಲಿ ಬೆರೆಸುವ ಮೂಲಕ ಬಾದಾಮಿ ಹಾಲನ್ನು ತಯಾರಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕ್ಲಿನಿಕಲ್ ಡಯಟೀಷಿಯನ್ ಡಾ.ರಿಧಿಮಾ ಅವರು, ಬಾದಾಮಿ ಹಾಲು ದನದ ಹಾಲಿಗೆ ಹೇಗೆ ದೃಢವಾದ ಪರ್ಯಾಯವಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಕ್ಯಾಲ್ಸಿಯಂ ಬಲವಾದ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ಬಹಳ ಮುಖ್ಯ. ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ವಿಶೇಷವಾಗಿ ನಮಗೆ ವಯಸ್ಸಾಗುತ್ತಾ ಹೋದಂತೆ, ಸಾಕಷ್ಟು ಕ್ಯಾಲ್ಸಿಯಂ ಸಿಗದೇ ...