Bengaluru, ಮೇ 16 -- ಸಾಮಾನ್ಯವಾಗಿ ಜನರು ಆಡುಭಾಷೆಯಲ್ಲಿ ಒಂದೇ ಶಬ್ದವನ್ನು ಎಲ್ಲಾ ಕಡೆಗಳಲ್ಲಿಯೂ ಬಳಸುವುದನ್ನು ಕಾಣಬಹುದು. ಅದರ ನಿಜವಾದ ಅರ್ಥ ಬೇರೆಯಾಗಿದ್ದು, ಅದನ್ನು ಬೇರೆ ಬೇರೆ ಸನ್ನಿವೇಶಗಳಿಗೆ ಬಳಕೆ ಮಾಡಬೇಕಿದ್ದರೂ ಕೂಡಾ ಆ ಶಬ್ದದ ಬಳಕೆ ಮಾಡಲಾಗುತ್ತದೆ. ಅಂತಹವುಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ನೈರ್ಮಲ್ಯಕ್ಕೆ ಸಂಬಂಧಿಸಿದ ಕೆಲವು ಶಬ್ದಗಳನ್ನು ಬಳಸಲಾಗುತ್ತದೆ. ಹೌದು, ಆ ಪದಗಳು ಬೇರೆ ಯಾವುದೂ ಅಲ್ಲ, ಬಾತ್‌ರೂಮ್‌, ವಾಶ್‌ರೂಮ್‌ ಮತ್ತು ರೆಸ್ಟ್‌ ರೂಮ್‌. ನಮ್ಮಲ್ಲಿ ಬಹಳಷ್ಟು ಜನರು ಈ ಮೂರು ಪದಗಳ ಅರ್ಥ ಒಂದೇ ಎಂದು ತಿಳಿದುಕೊಂಡಿದ್ದಾರೆ. ಹಾಗಾಗಿ ಅವುಗಳನ್ನು ಎಲ್ಲೆಡೆ ಬಳಸುತ್ತಾರೆ. ಆದರೆ ಆ ಮೂರು ಶಬ್ದಗಳ ಅರ್ಥ ಭಿನ್ನವಾಗಿದೆ. ಹಾಗೂ ಅವುಗಳನ್ನು ಬೇರೆ ಬೇರೆ ಜಾಗಗಳನ್ನು ಸೂಚಿಸಲು ಬಳಸಲಾಗುತ್ತದೆ. ಹಾಗಾದ್ರೆ ಬಾತ್‌ರೂಮ್‌, ವಾಶ್‌ರೂಮ್‌ ಹಾಗೂ ರೆಸ್ಟ್‌ರೂಮ್‌ ಈ ಶಬ್ದಗಳನ್ನು ಎಲ್ಲಿ ಬಳಸಬೇಕು ಎಂದು ನೋಡೋಣ.

ಬಾತ್‌ರೂಮ್‌ ಅಥವಾ ಸ್ನಾನಗೃಹ ಎಂದರೆ ಸ್ನಾನ ಮತ್ತು ಶೌಚಾಲಯ ಸೌಲಭ್ಯಗಳು ಲಭ್ಯವಿರುವ ಸ್ಥಳ. ...