Bagalkot, ಮೇ 5 -- ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮದ ರೈತರೊಬ್ಬರು ತಮ್ಮ ಗದ್ದೆ ಕಾಯಲು ಸೆಲೆಬ್ರಿಟಿಗಳನ್ನು ನಿಲ್ಲಿಸಿದ್ದು ಗಮನ ಸೆಳೆಯುವಂತಿದೆ. ಅದರಲ್ಲೂ ನಟಿ ರಚಿತಾ ರಾಮ್ ಸಹಿತ ಹಲವರ ಚಿತ್ರಗಳನ್ನು ಇದಕ್ಕೆ ಬಳಸಿದ್ದಾರೆ.
ರಬಕವಿ ಬನಹಟ್ಟಿ ತಾಲ್ಲೂಕಿನ ಕೆಸರಕೊಪ್ಪ ಗ್ರಾಮದ ನಾಗಪ್ಪ ಸದಾಶಿವ ಶಿರೋಳ ಎಂಬುವವರು ತರಕಾರಿ ಬೆಳೆಯುತ್ತಿದ್ದು.ಬೆಳೆಗೆ ದೃಷ್ಟಿ ಬಾಧಿಸದಿರಲಿ ಎಂದು ನಟಿ ಸಾಯಿ ಪಲ್ಲವಿ ಅವರ ಪೋಟೋವನ್ನು ಹಾಕಿದ್ದಾರೆ.
ಕೆಸರಗೊಪ್ಪ ರಸ್ತೆ ಪಕ್ಕದಲ್ಲೇ ಇರುವ ಮೆಣಸಿನಕಾಯಿ ತೋಟದಲ್ಲಿ ಬಗೆಬಗೆಯ ತರಕಾರಿಗಳ ಹಸಿರು ಒಂದೆಡೆ, ಮತ್ತೊಂದೆಡೆ ಕಂಗೊಳಿಸುವ ಭವ್ಯಾಗೌಡ ಸಹಿತ ಹಲವು ನಟಿಯರ ಭಾವಚಿತ್ರಗಳನ್ನು ಸವಾರರು ನೋಡುತ್ತ, ನಸುನಗುತ್ತ ಸಾಗುವುದು ಗಮನ ಸೆಳೆದಿದೆ.
ಒಂಬತ್ತು ವರ್ಷದಿಂದ ತರಕಾರಿಯನ್ನೇ ಬೆಳೆಯುತ್ತ ಬಂದಿರುವ ನಾಗಪ್ಪ ಅವರ ಎರಡು ಎಕರೆ ಕಿರು ಜಮೀನಿನಲ್ಲಿ ಸೌತೆಕಾಯಿ, ಮೆಣಸಿನಗಿಡ, ಟೊಮೇಟೋ ಬೆಳೆಗಳನ್ನು ಹುಲುಸಾಗಿ ಬೆಳೆದಿವೆ,. ಅವರ ಜಮೀನಿನಲ್ಲಿ ಕುಂಭಮೇಳ ಬೆಡಗಿ ಮೊನಾಲಿಸ...
Click here to read full article from source
To read the full article or to get the complete feed from this publication, please
Contact Us.