ಭಾರತ, ಏಪ್ರಿಲ್ 17 -- ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಲ್‌2 ಎಂಪುರಾನ್‌ ಸಿನಿಮಾ ಇದೀಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ಈ ಸಿನಿಮಾ, ಮಾರ್ಚ್‌ 27ರಂದು ತೆರೆಗೆ ಬಂದಿತ್ತು.

ಮಲಯಾಳಂ ಜತೆಗೆ ಕನ್ನಡ, ತೆಲುಗು, ತಮಿಳಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ 262 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಎಂಬ ದಾಖಲೆ ತನ್ನದಾಗಿಸಿಕೊಂಡಿತ್ತು.

ಏಪ್ರಿಲ್ 24ರ ಗುರುವಾರ ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಎಂಪುರಾನ್‌ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಒಂದೇ ತಿಂಗಳೊಳಗೆ ಒಟಿಟಿಗೆ ಆಗಮಿಸುತ್ತಿದೆ.

ಎಂಪುರಾನ್ ‌ಕಲೆಕ್ಷನ್‌ ವಿಚಾರ ಮಾತ್ರವಲ್ಲದೆ, ಕಾಂಟ್ರವರ್ಸಿಗೂ ಕಾರಣವಾಗಿತ್ತು. ಚಿತ್ರದಲ್ಲಿ 2002ರ ಗುಜರಾತ್‌ನ ಗೋದ್ರಾ ಗಲಭೆಯನ್ನು ಚಿತ್ರದಲ್ಲಿ ತೋರಿಸಿದ್ದಕ್ಕೆ ವಿವಾದ ಸೃಷ್ಟಿಯಾಗಿತ್ತು.

2019ರಲ್ಲಿ ಬಂದ ಲೂಸಿಫರ್ ಚಿತ್ರದ ಸೀಕ್ವೆಲ್ ಆಗಿ ಎಲ್‌2 ಎಂಪುರಾನ್‌ ಸಿನಿಮಾ ತೆರೆಗೆ ಬಂದಿದೆ. ಇದೇ ಚ...