ಭಾರತ, ಮಾರ್ಚ್ 21 -- ನಗದು ಸಮೃದ್ಧ ಲೀಗ್ ಐಪಿಎಲ್ (IPL) ಕಳೆದ 17 ವರ್ಷಗಳಿಂದ ಕ್ರಿಕೆಟ್​ ಜಗತ್ತಿನಲ್ಲಿ ಟಿ20 ಫ್ರಾಂಚೈಸ್​ ಲೀಗ್​ಗಳ ಡ್ಯಾಡಿ (ಅಪ್ಪ)ಯಾಗಿ​ ಆಗಿ ಹೊರಹೊಮ್ಮಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಸೃಷ್ಟಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದೆ. 2 ತಿಂಗಳ ಕಾಲ ಜರುಗುವ ಮಿಲಿಯನ್ ಡಾಲರ್ ಟೂರ್ನಿಯ ಜನಪ್ರಿಯತೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕುಸಿತ ಕಂಡಿಯೇ ಇಲ್ಲ. 18ನೇ ಆವೃತ್ತಿಯ ಐಪಿಎಲ್​​ಗೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ.​ ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ ಪಂದ್ಯಗಳಿಗೂ ಇರದ ಕ್ರೇಜ್​ ಹೊಂದಿದೆ. ಆದರೆ ಶ್ರೀಮಂತ ಲೀಗ್​ನಲ್ಲಿ 20 ಕೋಟಿ ರೂ ಬಹುಮಾನಕ್ಕಾಗಿ ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ ಮತ್ತು ತಂಡದ ನಿರ್ವಹಣೆಗೆ ಬರೋಬ್ಬರಿ 200 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುವುದೇಕೆ? ಪ್ರತಿ ತಂಡಕ್ಕೆ ಬರುವ ಆದಾಯದ ಮೂಲಗಳು ಯಾವುವು? ಇಲ್ಲಿದೆ ವಿವರ.

ಐಪಿಎಲ್ ಟೂರ್ನಿಯಿಂದ ದೇಶೀಯ ಕ್ರಿಕೆಟಿಗರು ಬೆಳಕಿಗೆ ಬರುತ್ತಿದ್ದ...