ಭಾರತ, ಮೇ 24 -- ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಮುಕುಲ್‌ ದೇವ್‌ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇವರು ಕನ್ನಡ ನಟ ಉಪೇಂದ್ರ ಜತೆ ರಜನಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು. ಇವರಿಗೆ ದೆಹಲಿಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕನ್ನಡದ ನಾಗರಹಾವು ಸಿನಿಮಾದಲ್ಲಿಯೂ ಇವರು ನಟಿಸಿದ್ದರು.

"ನನ್ನ ಸಹೋದರ ಮುಕುಲ್‌ ದೇವ್‌ ಅವರಿಗೆ ಶಾಂತಿ ಸಿಗಲಿ! ನಿಮ್ಮೊಂದಿಗೆ ಕಳೆದ ಸಮಯ ಯಾವಾಗಲೂ ಅಮೂಲ್ಯವಾಗಿರುತ್ತದೆ. SonOfSardaar2 ನಿಮ್ಮ ಹಂಸಗೀತೆ, ಇದರ ಮೂಲಕ ಜನರಿಗೆ ಸಂತೋಷ ಮತ್ತು ಖುಷಿ ಹಂಚುವಿರಿ. ಅವರೆಲ್ಲರನ್ನು ನಗಿಸುವಿರಿ" ಎಂದು ವಿಂದು ದಾರಾ ಸಿಂಗ್ ಟ್ವೀಟ್ ಮಾಡಿದ್ದಾರೆ.

"ತನ್ನ ಹೆತ್ತವರ ಸಾವಿನ ನಂತರ ಮುಕುಲ್ ತನ್ನಷ್ಟಕ್ಕೆ ಇದ್ದ. ಅವನ ಜೀವನ ಅವನೇ ನೋಡಿಕೊಳ್ಳುತ್ತಿದ್ದ. ಕಳೆದ ಕೆಲವು ದಿನಗಳಲ್ಲಿ ಅವನ ಆರೋಗ್ಯ ಹದಗೆಟ್ಟಿತ್ತು. ಅವನು ಆಸ್ಪತ್ರೆಯಲ್ಲಿದ್ದನು. ಅವನನ್ನು ಇಷ್ಟಪಟ್ಟ ಎಲ್ಲರಿಗೂ ನನ್ನ ಸಂತ...