ಭಾರತ, ಜೂನ್ 19 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 26 ರ ಶುಕ್ರವಾರದಿಂದ 19ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ವಿಶ್ರಾಂತಿ ಇಲ್ಲದೆ ಕುಟುಂಬದ ಒಳಿತಿಗಾಗಿ ದುಡಿಯುವಿರಿ. ಮನದಲ್ಲಿನ ಬೇಸರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಪತಿ ಮತ್ತು ಕುಟುಂಬ ಸದಸ್ಯರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ಕುಟುಂಬದ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಿರಿ. ಕೆಲವೊಮ್ಮೆ ಸಹನೆ ಕಳೆದುಕೊಂಡು ಉಗ್ರವಾಗಿ ವರ್ತಿಸುತ್ತೀರಿ. ಉದ್ಯೋಗದಲ್ಲಿನ ಮಾರ್ಪಾಡುಗಳನ್ನು ನಿಮಗೆ ಅನುಕ...