ಭಾರತ, ಮಾರ್ಚ್ 22 -- ಮಂಗಳೂರು: ಬಹರೈನ್‌ನಲ್ಲಿ ನಡೆಯುವ ಫ್ಯಾಶನ್ ಶೋಗೆ ಮಂಗಳೂರಿನ ಏಳು ಯುವತಿಯರು ಆಯ್ಕೆಯಾಗಿದ್ದು, ಕಿರೀಟ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ಬಹರೈನ್‌ನಲ್ಲಿ ಪ್ರತಿ ವರ್ಷ ಕುಡ್ಲೋತ್ಸವ (Bahrain Kudlotsava) ಎಂಬ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಮಂಗಳೂರು ಮೂಲದವರು ನಡೆಸುವ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಶೋ ಕೂಡ ಒಂದು. ಈ ಬಾರಿ ಎಪ್ರಿಲ್ 4 ರಂದು ಬಹರೈನ್‌ನಲ್ಲಿ ಫ್ಯಾಶನ್ ಶೋ ನಡೆಯಲಿದೆ. ಈ ಫ್ಯಾಶನ್ ಶೋ ನಲ್ಲಿ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಯುವತಿಯರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮಂಗಳೂರಿನ ವೆನ್ಜ್ ಮಾಡೆಲ್‌ನಲ್ಲಿ ತರಬೇತಿ ಪಡೆದ ಏಳು ಯುವತಿಯರು ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.

ಮಂಗಳೂರಿನ ಬಲ್ಲಾಲ್ ಭಾಗ್‌ನಲ್ಲಿ ಎಂಟು ತಿಂಗಳ ಹಿಂದೆ ವೆನ್ಜ್ ಮಾಡೆಲ್ ಅಕಾಡೆಮಿಯನ್ನು ವೆನ್ಸಿಟಾ ಡಯಾಸ್ ಎಂಬವರು ಆರಂಭಿಸಿದ್ದರು. ವೆನ್ಸಿಟಾ ಅವರು ಥಾಯ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಅವರು ಸಿನಿಮಾ ನಟಿಯೂ ಆಗಿದ್ದ...