ಭಾರತ, ಮಾರ್ಚ್ 12 -- ಪಾಕಿಸ್ತಾನ ರೈಲು ಅಪಹರಣ ಸದ್ಯ ಜಗತ್ತಿನ ಗಮನ ಸೆಳೆದಿದೆ. ರೈಲಿಗೆ ರೈಲೆ ಅಪಹರಣಕ್ಕೆ ಒಳಗಾಗುವುದು ವಿರಳ. ಪ್ರಯಾಣಿಕರ ಸಹಿತ ಇಡೀ ರೈಲನ್ನು ಅಪಹರಣಕಾರರು ಒತ್ತೆಯಾಗಿಟ್ಟುಕೊಂಡಿದ್ದಾರೆ. ಬಲೂಚ್ ಲಿಬರೇಷನ್ ಆರ್ಮಿ ರೈಲು ಅಪಹರಣ ಪ್ರಕರಣದ ಹೊಣೆಗಾರಿಕೆ ಹೊತ್ತುಕೊಂಡಿದೆ. ಇದೇ ಕಾರಣ ಬಲೂಚಿಸ್ತಾನದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೌದು, ಪಾಕಿಸ್ತಾನದಲ್ಲೂ ಪ್ರತ್ಯೇಕತಾವಾದ ಇದೆ. ಪ್ರತ್ಯೇಕ ಬಲೂಚಿಸ್ತಾನ ಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಪಾಕಿಸ್ತಾನ ರಚನೆಯಾಗುವ ಮೊದಲೇ ಹುಟ್ಟಿಕೊಂಡ ಕೂಗು ಅದು. ಇತ್ತೀಚಿನ ವರ್ಷಗಳಲ್ಲಿ ಅದಕ್ಕೆ ಬಲ ಬಂದಿದ್ದು, ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಹಿಂಸಾತ್ಮಕ ಹೋರಾಟ ನಡೆಸುತ್ತಿದೆ. ಅಫ್ಘಾನಿಸ್ತಾನ- ಇರಾನ್ ಗಡಿ ಭಾಗದ ಬಲೂಚಿಸ್ತಾನದಲ್ಲಿ ಬಲಿಷ್ಠವಾಗಿರುವ ಬಂಡುಕೋರ ಸಂಘಟನೆ ಬಿಎಲ್‌ಎ. ಚೀನಾ ಹೂಡಿಕೆ ಮಾಡಿರುವ ಗ್ವಾದಾರ್ ಬಂದರು ಹಾಗೂ ಇತರೆ ಯೋಜನೆಗಳಿರುವ ಪ್ರದೇಶವೂ ಇರುವಂಥದ್ದು ಬಲೂಚಿಸ್ತಾನದಲ್ಲೇ.

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡ...