ಭಾರತ, ಫೆಬ್ರವರಿ 26 -- ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025 ಟೂರ್ನಿಯ 8ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ರೋಚಕ ಜಯ ಸಾಧಿಸಿದೆ. ಲಾಹೋರ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಅಫ್ಘನಿಸ್ತಾನ, ಇಂಗ್ಲೆಂಡ್‌ ತಂಡವನ್ನು 8 ರನ್‌ಗಳಿಂದ ರೋಚಕವಾಗಿ ಸೋಲಿಸಿದೆ. ಅಲ್ಲದೆ ಆಂಗ್ಲರನ್ನು ಟೂರ್ನಿಯಿಂದಲೇ ಹೊರಹಾಕಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿಯೂ ಇಂಗ್ಲೆಂಡ್‌ ತಂಡವನ್ನು ಅಫ್ಘನ್‌ ಸೋಲಿಸಿತ್ತು. ಇದೀಗ ಮತ್ತೊಂದು ಐಸಿಸಿ ಟೂರ್ನಿಯಲ್ಲಿ ಕ್ರಿಕೆಟ್‌ ಜನಕರನ್ನು ಸೋಲಿಸಿ ಚರಿತ್ರೆ ಸೃಷ್ಟಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ, ಇಬ್ರಾಹಿಂ ಜದ್ರಾನ್‌ ಆಕರ್ಷಕ ಶತಕದ ನೆರವಿಂದ 7 ವಿಕೆಟ್‌ ನಷ್ಟಕ್ಕೆ 325 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, 317 ರನ್‌ಗಳಿಗೆ ಆಲೌಟ್‌ ಆಯ್ತು. ಈ ಮೂಲಕ ಅಫ್ಘನ್‌ ಟೂರ್ನಿಯಲ್ಲಿ ಮೊದಲ ಗೆಲುವು ಸಂಪಾದಿಸಿ, ಇನ್ನೂ ಸೆಮಿಫೈನಲ್‌ ಆಸೆ ಜೀವಂತವಾಗಿರಿಸಿಕೊಂಡಿದೆ. ಅತ್ತ ಬಾಂಗ್ಲಾದೇಶ ಹಾಗೂ ಪಾಕ...