ಭಾರತ, ಮಾರ್ಚ್ 4 -- ಆಸ್ಟ್ರೇಲಿಯಾದ ಜನಪ್ರಿಯ ರಕ್ತ ಮತ್ತು ಪ್ಲಾಸ್ಮಾ ದಾನಿ ಜೇಮ್ಸ್ ಹ್ಯಾರಿಸನ್ (James Harrison) ಇಹಲೋಕ ತ್ಯಜಿಸಿದ್ದಾರೆ. ಲಕ್ಷಾಂತರ ಜೀವಗಳನ್ನು ಉಳಿಸಿದ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಾಂಗರೂ ನಾಡಿನ "ಚಿನ್ನದ ತೋಳಿನ ಮನುಷ್ಯ (Man with the Golden Arm)" ಎಂದೇ ಜನಪ್ರಿಯರಾಗಿದ್ದ ಹ್ಯಾರಿಸನ್ ಸುಮಾರು 50 ವರ್ಷಗಳ ಕಾಲ ಬರೋಬ್ಬರಿ 24 ಲಕ್ಷ ಶಿಶುಗಳ ಜೀವ ಉಳಿಸಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇಂದು ಹ್ಯಾರಿಸನ್‌ ಮಡಿದರೂ, ಅವರ ರಕ್ತವು ಲಕ್ಷಾಂತರ ದೇಹಗಳಲ್ಲಿದೆ.

ಕಳೆದ ಫೆಬ್ರುವರಿ 17ರಂದು ಆಸ್ಪತ್ರೆಯಲ್ಲಿ ನಿದ್ರೆಯ ಸ್ಥಿತಿಯಲ್ಲಿಯೇ ಶಾಂತಿಯುತ ಮರಣ ಕಂಡಿದ್ದಾರೆ ಎಂದು ರಕ್ತದಾನಕ್ಕೆ ಕಾರಣವಾಗಿರುವ ಆಸ್ಟ್ರೇಲಿಯನ್ ರೆಡ್‌ಕ್ರಾಸ್ ಶಾಖೆ ಲೈಫ್‌ಬ್ಲಡ್ ಘೋಷಿಸಿದೆ.

ಅವರು "ಒಂದೇ ಒಂದು ಬಾರಿ ಕೂಡಾ ಅಪಾಯಿಂಟ್‌ಮೆಂಟ್ ತಪ್ಪಿಸಿಲ್ಲ" ಎಂದು ಸಂಸ್ಥೆ ಹೇಳಿದೆ. ಪ್ರತಿ ಎರಡು ವಾರಗಳಿಗೊಮ್ಮೆ ಹೋಗಿ ದಾನ ಮಾಡಿ ಬರುತ್ತಿದ್ದರು. ಅಷ್ಟೇ ಅಲ್ಲ, ರಕ್ತದಾನಕ್ಕೆ "ಪ್ರತಿಯಾಗಿ ಏನನ್ನ...