Vjayapura, ಏಪ್ರಿಲ್ 20 -- ವಿಜಯಪುರ: ವಿಜಯಪುರ ಬರದ ನಾಡು. ಇಡೀ ರಾಜ್ಯದಲ್ಲಿಯೇ ಅತೀ ಕಡಿಮೆ ಅರಣ್ಯ ಪ್ರದೇಶ ಇರುವುದು ವಿಜಯಪುರ ಜಿಲ್ಲೆಯಲ್ಲಿ. ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲರ ಪ್ರಯತ್ನದ ಫಲವಾಗಿ ಹಸಿರಿನ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಾಗಿದೆ. ನೀರಾವರಿ ಪ್ರದೇಶವೂ ವಿಸ್ತರಣೆಗೊಂಡಿದೆ. ಈಗ ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಬರುವ, ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನೆನಪಿನಲ್ಲಿ ವಿಜಯಪುರ ಸಮೀಪದ ಬಾಬಾ ನಗರದಲ್ಲಿ ಅರಣ್ಯ ರೂಪುಗೊಳ್ಳಲಿದೆ. ಬಾಬಾನಗರ ಬಳಿ ಅಂದಾಜು 2000 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಬಳಸಿ ಮಾನವ ನಿರ್ಮಿತ ಬೃಹತ್ ಅರಣ್ಯ ಬೆಳೆಸುವ ಮೂಲಕ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವುದಕ್ಕೆ ಹಾಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮುಂದಾಗಿದ್ದಾರೆ.

ವಿಜಯಪುರ ಜಿಲ್ಲೆ ಬಹುತೇಕ ಬಯಲುನಾಡು. ಅಲ್ಲಲ್ಲಿ ಮರಗಳು ಇರುವುದು ಬಿಟ್ಟರೆ ಅರಣ್ಯ ಎನ್ನುವುದು ಅತೀ ...