ಭಾರತ, ಫೆಬ್ರವರಿ 22 -- ಮಂಗಳೂರು: ದಕ್ಣಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಘಂಟೆ ಗಣಪತಿ ಎಂದೇ ಪ್ರಸಿದ್ಧಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹರಕೆ ಮೂಲಕ ಸಮರ್ಪಿತವಾದ, ಕೋಟಿಗಟ್ಟಲೆ ಮೌಲ್ಯದ ಗಂಟೆಗಳ ವಿಲೇವಾರಿ ನಡೆಯದಿರುವುದು, ದೇವಾಲಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಸುಮಾರು 50-55 ಟನ್‌ಗಳಷ್ಟು ಗಂಟೆಗಳು ದೇಗುಲದ ಸ್ಟಾಕ್ ರೂಮ್‌ನಲ್ಲಿ ರಾಶಿ ಬಿದ್ದಿವೆ. ಸರ್ಕಾರ ಈಗಲೂ ತ್ವರಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಗಂಟೆಗಳಿಗೆ ಮತ್ತಷ್ಟು ತುಕ್ಕು ಹಿಡಿದು ಅತಿ ಕಡಿಮೆ ಬೆಲೆಗೆ ವಿಲೇವಾರಿಯಾಗುವ ಆತಂಕ.

ಕಳೆದೈದು ವರ್ಷಗಳಿಂದ ವಿವಿಧ ಕಾರಣಗಳಿಗಾಗಿ ದೇಗುಲದ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ವ್ಯವಸ್ಥಾಪನಾ ಸಮಿತಿಗೆ ಘಂಟೆಗಳನ್ನು ಮಾರಾಟದ ಮೂಲಕ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. 55 ಟನ್ ಘಂಟೆಗಳ ಅಂದಾಜು ಬೆಲೆ ರೂ. 2.5 ಕೋಟಿಗಿಂತಲೂ ಅಧಿಕ ಆಗಬಹುದು ಎಂದು ಲೆಕ್ಕ ಹಾಕಲಾಗಿದೆ. ಈ ಹಣ ದೊರೆತಲ್ಲಿ ದೇಗುಲದ ಸಮಗ್ರ ಅಭಿವೃದ್ಧಿ ಮಾಡಲು ಸಾಧ್ಯ

20...