ಭಾರತ, ಜನವರಿ 31 -- ಬೆಂಗಳೂರು: ಚೇತರಿಕೆಯ ಭರವಸೆಯಿಲ್ಲದ ರೋಗಿಯು ಘನತೆಯಿಂದ ಮರಣಹೊಂದುವ ಹಕ್ಕಿನ ಕುರಿತು ಸುಪ್ರೀಂಕೋರ್ಟ್‌ ಹೊರಡಿಸಿರುವ ನಿರ್ದೇಶನವನ್ನು ಜಾರಿಗೆ ತರುವ ಮೂಲಕ ನಮ್ಮ ಕರ್ನಾಟಕ ಆರೋಗ್ಯ ಇಲಾಖೆ ಐತಿಹಾಸಿಕ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ.

"ಚಿಕಿತ್ಸೆಗೆ ಸ್ಪಂದಿಸದೆ, ಉಳಿಯುವ ಯಾವುದೇ ಭರವಸೆಯಿಲ್ಲದೆ ಅಸ್ವಸ್ಥರಾಗಿರುವವರಿಗೆ ಮತ್ತು ಜೀವರಕ್ಷಕ ಚಿಕಿತ್ಸೆಗೆ ಯಾವುದೇ ಸ್ಪಂದನೆ ನೀಡದ ರೋಗಿಗಳು ಈ ಆದೇಶದಿಂದ ಪ್ರಯೋಜನ ಪಡೆಯಬಹುದು.

ಇದರೊಂದಿಗೆ ನಮ್ಮ ಇಲಾಖೆಯು ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್ (AMD) ಅಥವಾ ಲಿವಿಂಗ್ ವಿಲ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ರೋಗಿಯು ಭವಿಷ್ಯದಲ್ಲಿ ತಮ್ಮ ವೈದ್ಯಕೀಯ ಚಿಕಿತ್ಸೆ ಕುರಿತು ತಮ್ಮ ಸ್ವಇಚ್ಛೆಗಳನ್ನು ದಾಖಲಿಸಬಹುದು" ಎಂದು ಅವರು ಹೇಳಿದ್ದಾರೆ.

ಈ ಮಹತ್ವದ ಹೆಜ್ಜೆಯು ಅನೇಕ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ನೆಮ್ಮದಿ ಮತ್ತು...