Bangalore, ಮಾರ್ಚ್ 18 -- ಪಾಕಿಸ್ತಾನ ತಂಡ ಸೋಲಿನ ಮೇಲೆ ಸೋಲು ಎದುರಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಐ ಪಂದ್ಯದಲ್ಲೂ ಮುಗ್ಗರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತ್ರಿಕೋನ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ, ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ​ ಸೋತಿದ್ದ ಪಾಕ್ ಪ್ರಸ್ತುತ ನಡೆಯುತ್ತಿರುವ ಚುಟುಕು ಸರಣಿಯಲ್ಲೂ ಶರಣಾಗತಿ ಮುಂದುವರೆಸಿದೆ. ಡುನೆಡಿನ್‌ನಲ್ಲಿ ನಡೆದ 2ನೇ ಟಿ20ಐ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸಲ್ಮಾನ್ ಆಘಾ ಪಡೆ 5 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಸತತ ಎರಡನೇ ಪಂದ್ಯದಲ್ಲೂ ಗೆದ್ದ ಮೈಕಲ್ ಬ್ರೇಸ್​ವೆಲ್ ಪಡೆ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಪಡೆದಿದೆ.

ಮಳೆ ಅಡ್ಡಿಪಡಿಸಿದ ಕಾರಣ ಈ ಟಿ20 ಪಂದ್ಯವನ್ನು ತಲಾ 15 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್‌ವೆಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲು ...