Bangalore, ಏಪ್ರಿಲ್ 20 -- ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಉತ್ತರಾಖಂಡದ ಬದರಿನಾಥದಲ್ಲಿರುವ ದೇವಿ ಊರ್ವಶಿ ದೇಗುಲವು ತನ್ನ ದೇವಾಲಯ (ನನಗಾಗಿ ನಿರ್ಮಿಸಿದ ದೇವಾಲಯ) ಎಂದಿದ್ದರು. ಈಕೆಯ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಊರ್ವಶಿ ದೇವಿ ದೇಗುಲದ ಆರ್ಚಕರು, ಅಧಿಕಾರಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ನಡುವೆ ನಟಿಯ ಪಿಆರ್‌ಒಗಳು ಈ ಹೇಳಿಕೆಯನ್ನು ಸಮರ್ಥಿಸಲು ಯತ್ನಿಸಿದ್ದಾರೆ. "ಮೇಡಂ ಹೇಳಿದ್ದು ಆ ಅರ್ಥದಲ್ಲಿ ಅಲ್ಲ" ಎಂದು ಹೇಳಿದ್ದರು.

ಸದ್ಯ ಈ ವಿವಾದ ತಣ್ಣಗಾದಂತೆ ಕಾಣಿಸುತ್ತಿದೆ. ಈ ನಡುವೆ ನಟಿಯು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳು ನೆಟ್ಟಿಗರನ್ನು ಸೆಳೆಯುತ್ತಿದೆ. ಅವರ ಸೊಗಸಾದ ನೋಟ, ಚಂದದ ಮೈಮಾಟ ಅಭಿಮಾನಿಗಳನ್ನು ಸೆಳೆಯುತ್ತಿದೆ. ಊರ್ವಶಿ ರೌಟೇಲಾ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಇಲ್ಲಿವೆ.

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ತನ್ನ ಆಕರ್ಷಕ ನೋಟದಿಂದ ಎಲ್ಲರನ್ನೂ ಮೋಡಿ ಮಾಡುತ್ತಿದ್ದಾರೆ. ಹಸಿರು ವೆಲ್ವೆಟ್ ಉಡುಪಿನಲ್ಲಿ ಅವರ ಲುಕ್ ಅದ್ಭುತವಾಗಿದೆ. ಯುವಕರ...