ಭಾರತ, ಜನವರಿ 26 -- ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭಿನ್ನ, ವಿಭಿನ್ನ ಮತ್ತು ಆಕರ್ಷಕ ಅಪ್​ಡೇಟ್​ಗಳು ಮತ್ತು ಅಗ್ಗದ ದರದೊಂದಿಗೆ ನೂತನ ಮೊಬೈಲ್​ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಅದರಂತೆ ಜನಪ್ರಿಯ ರಿಯಲ್​ ಮಿ ಬಹುನಿರೀಕ್ಷಿತ ರಿಯಲ್​ ಮಿ 14ರ ಸರಣಿಯ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ ರಿಯಲ್​ಮಿ 14 ಪ್ರೊ ಮತ್ತು ರಿಯಲ್​ಮಿ 14 ಪ್ರೊ ಪ್ಲಸ್. ಇವುಗಳ ಅತ್ಯಾಕರ್ಷಕ ಫೀಚರ್​ ಬಣ್ಣ ಬದಲಾಯಿಸುವ ತಂತ್ರಜ್ಞಾನ! ವಿನ್ಯಾಸ, ಕ್ಯಾಮೆರಾ, ಕಾರ್ಯಕ್ಷಮತೆ ಫೀಚರ್ಸ್ ಕೂಡ ಗಮನ ಸೆಳೆದಿವೆ. ಆದಾಗಿಯೂ ಆದಾಗ್ಯೂ, ಕಳೆದ ವರ್ಷ 30,000 ರೂಪಾಯಿಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಒನ್​ಪ್ಲಸ್​ ನಾರ್ಡ್-4 ಮೊಬೈಲ್​ಗಿಂತ ಇದು ಉತ್ತಮವಾಗಿದೆಯೇ? ಇದರ ಬೆಲೆಯೆಷ್ಟು? ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್? ಯಾವ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ? ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ರಿಯಲ್​ಮಿ 14 ಪ್ರೊ ಪ್ಲಸ್ 8 ಜಿಬಿ ರ‍್ಯಾಮ್​ (RAM) ಮತ್ತು 128 ಜಿಬಿ ಸ್ಟೋರೇಜ್ ವೇರಿಯಂಟ್​​ನ ಬೆಲೆ 29,999...