ಭಾರತ, ಮೇ 6 -- ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಬಡವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಜಾರಿಯಾಗಿರುವ ಯೋಜನೆಯ ಫಲ ಅಂತಿಮ ಫಲಾನುಭವಿಗೆ ತಲುಪುವಾಗ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದರ ಪರಿಶೀಲನೆ ಆಗುತ್ತಿಲ್ಲ. ಇಂತಹ ಅನೇಕ ಲೋಪಗಳು ಯೋಜನೆಯಲ್ಲಿವೆ. ಅಂತಹ ಒಂದು ಲೋಪದ ಕಡೆಗೆ ವಿಶೇಷವಾಗಿ, ಬಡವರ 'ಅನ್ನಭಾಗ್ಯ' ಅಕ್ಕಿಯನ್ನು ಮಳೆಯಲ್ಲಿ ಒದ್ದೆ ಮಾಡುವ ಭ್ರಷ್ಟ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಕಡೆಗೆ ಪತ್ರಕರ್ತ ರಾಜೀವ ಹೆಗಡೆ ಗಮನಸೆಳೆದಿದ್ದಾರೆ.

ʼಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆʼ ಎನ್ನುವ ಗಾದೆಯಿದೆ. ಇದನ್ನು ನಮ್ಮ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಪ್ಪದೇ ಅನ್ವಯಿಸಬೇಕು. ಬಡವರ ಹೊಟ್ಟೆ ತುಂಬಿಸಲು ಹೊರಟಿರುವ ಸರ್ಕಾರ ಅಕ್ಷರಶಃ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬಡವರ ಅಕ್ಕಿ ಹಾಳಾಗುತ್ತಿದೆ.

ಮೊನ್ನೆ ಊರಿನಿಂದ ಬರುವಾಗ ಶಿವಮೊಗ್ಗ-ಚಿತ್ರದುರ್ಗ ರಸ್ತೆಯಲ್ಲಿ ಒಂದ...