ಭಾರತ, ಮಾರ್ಚ್ 7 -- ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್‌ 7) 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬರೋಬ್ಬರಿ 4 ಲಕ್ಷ ಕೋಟಿ ಬಜೆಟ್ ಮಂಡಿಸುವ ಮೂಲಕ ಕರ್ನಾಟಕದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಮಾತ್ರವಲ್ಲ ಸಿದ್ದರಾಮಯ್ಯ ಅವರು 16ನೇ ಬಾರಿಗೆ ಮಂಡಿಸಿದ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದು ಅವರ ಮುಖಭಾವ ಹಾಗೂ ವಿಧಾನಸಭೆಯಲ್ಲಿ ಕಂಡ ದೃಶ್ಯಗಳ ಚಿತ್ರನೋಟ ಇಲ್ಲಿದೆ.

ಸುಮಾರು 3 ಗಂಟೆ 27 ನಿಮಿಷಗಳ ಕಾಲ ಸುದೀರ್ಘ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಪಕ್ಕದಲ್ಲಿ ಡಿಕೆ ಶಿವಕುಮಾರ್ ಕುಳಿತಿರುವುದು ಕಾಣಬಹುದು.

ಬಜೆಟ್ ಮಂಡನೆ ವೇಳೆ ಎಂದಿನಂತೆ ಉತ್ಸಾಹಿ ಯುವಕನಂತೆ ಕಂಡುಬಂದರು ಸಿಎಂ ಸಿದ್ದರಾಮಯ್ಯ. ನಗುಮೊಗದಿಂದಲೇ ತಮ್ಮ ಸುದೀರ್ಘ ಬಜೆಟ್ ಅನ್ನು ಮಂಡಿಸಿದ ಸಿದ್ದರಾಮಯ್ಯ, ರಾಜ್ಯಕ್ಕೆ ವಿವಿಧ ಕೊಡುಗೆಗಳನ್ನು ನೀಡುವ ಮೂಲಕ ರಾಜ್ಯದ ಜನತೆಯ ಮೊಗದಲ್ಲೂ ನಗು ಮೂಡುವಂತೆ ಮಾಡಿದ್ದಾರೆ.

ಬಜೆಟ್...