ಭಾರತ, ಫೆಬ್ರವರಿ 1 -- ಗುರಜಾಡ ವೆಂಕಟ ಅಪ್ಪರಾವ್ ತೆಲುಗಿನ ಖ್ಯಾತಿ ಕವಿ, ನಾಟಕಕಾರ, ಸಮಾಜ ಸುಧಾರಕ. ತನ್ನ ಕೃತಿಗಳಿಂದ ತೆಲುಗು ರಂಗಭೂಮಿಯಲ್ಲಿ ಖ್ಯಾತಿ ಪಡೆದ ವ್ಯಕ್ತಿ ಇವರಾಗಿದ್ದಾರೆ. 1862, ಸೆಪ್ಟೆಂಬರ್‌ 21ರಂದು ಇವರು ಆಗಿನ ಮದ್ರಾಸ್ ಪ್ರಾಂತ್ಯದಲ್ಲಿ ಜನಿಸಿದ್ದರು. 1892 ರಲ್ಲಿ ಇವರು ಬರೆದ 'ಕನ್ಯಾಸುಲ್ಕಂ' ಎಂಬ ನಾಟಕ ತೆಲುಗು ಭಾಷೆಯ ಶ್ರೇಷ್ಠ ನಾಟಕವೆಂದು ಪರಿಗಣಿಸಲ್ಪಟ್ಟಿದೆ.

ಭಾರತೀಯ ರಂಗಭೂಮಿಯ ಪ್ರವರ್ತಕರಲ್ಲಿ ಒಬ್ಬರಾದ ಅಪ್ಪಾರಾವ್ ಕವಿಶೇಖರ ಮತ್ತು ಅಭ್ಯುದಯ ಕವಿತಾ ಪಿತಾಮಹುಡು ಎಂಬ ಬಿರುದುಗಳನ್ನು ಹೊಂದಿದ್ದಾರೆ. 'ದೇಸಮುನು ಪ್ರೇಮಿಂಚುಮನ್ನಾ' ಎಂಬ ಪ್ರಸಿದ್ಧ ತೆಲುಗು ದೇಶಭಕ್ತಿ ಗೀತೆಯನ್ನು ಬರೆದವರು ಇವರಾಗಿದ್ದಾರೆ.

1897ರಲ್ಲಿ ಕನ್ಯಾಸುಲ್ಕಂ ನಾಟಕ ಪ್ರಕಟಗೊಂಡಿತು. ಇದನ್ನು ಮಹಾರಾಜ ಆನಂದ ಗಜಪತಿಗೆ ಸಮರ್ಪಿಸಲಾಗಿದೆ. ಅಪ್ಪರಾವ್ ಅವರು ತಮ್ಮ ಸಹೋದರ ಶ್ಯಾಮಲ ರಾವ್ ಅವರೊಂದಿಗೆ ಸೇರಿ ಹಲವಾರು ಇಂಗ್ಲಿಷ್ ಕವಿತೆಗಳನ್ನು ಬರೆದ್ದಿದ್ದರು. 'ಇಂಡಿಯನ್ ಲೀಷರ್ ಅವರ್' ಅವರ ಆತ್ಮಕಥೆ ಸಾರಂಗಧಾರ ಕೂಡ ಪ್ರಕಟಗ...