ಭಾರತ, ಮಾರ್ಚ್ 7 -- Karnataka Budget 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2025-26ನೇ ಸಾಲಿನ ಬಜೆಟ್ ಅವನ್ನು ಕರ್ನಾಟಕ ಬಿಜೆಪಿ ಕಟುವಾಗಿ ಟೀಕಿಸಿದ್ದು, ಕರ್ನಾಟಕ ಬಜೆಟ್‌ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿಎಂ ಸಿದ್ದರಾಮಯ್ಯ ವರೆ, ಬಜೆಟ್‌ ನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರ ಎಂದು ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಭಾರತೀಯ ಜನತಾ ಪಾರ್ಟಿ, ಬಜೆಟ್ ಸಂಬಂಧ ಒಂದಷ್ಚು ಮಾಹಿತಿಯನ್ನು ಹಂಚುಕೊಂಡು ಸಿಎಂ ಸಿದ್ದರಾಮಯ್ಯವರನ್ನು ಟೀಕಿಸಿದೆ. ಆ ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಮುಗಿಬಿದ್ದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಕರ್ನಾಟಕದ ಬಿಜೆಪಿ ಏನೆಲ್ಲಾ ಟೀಕೆಗಳನ್ನು ಮಾಡಿದೆ ಎಂಬುದನ್ನು ನೋಡುವುದಾದರೆ, ಕರ್ನಾಟಕ ಬಜೆಟ್‌ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರೆ, ಬಜೆಟ್‌ ನಲ್ಲಿ ಎಸ್ಸಿ,ಎಸ್ಟಿ,ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ...