नई दिल्ली, ಏಪ್ರಿಲ್ 18 -- ನವದೆಹಲಿ: ಭಾರತದ ಉದ್ದಗಲಕ್ಕೂ ರೈಲ್ವೆ ಪ್ರಯಾಣಿಕರು ಬಹಳ ಕಾತರದಿಂದ ಕಾಯುತ್ತಿದ್ದ ಖುಷಿ ಸುದ್ದಿ ಬಂದೇ ಬಿಡ್ತು ನೋಡಿ. ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕೇರಳ - ಕರ್ನಾಟಕ ನಡುವೆ ಸಂಚರಿಸಲಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೇರಳದ ತಿರುವನಂತಪುರದಿಂದ ಕರ್ನಾಟಕದ ಮಂಗಳೂರು ನಡುವೆ ಈ ರೈಲು ಸಂಚರಿಸಲಿದೆ. ಸದ್ಯ ಕುಳಿತು ಸಂಚರಿಸುವ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ರೈಲು ದೇಶ ವ್ಯಾಪಿ ವಿವಿಧ ರೈಲ್ವೆ ನಿಲ್ದಾಣಗಳ ನಡುವೆ ಓಡಾಡುತ್ತಿದೆ. ಶೀಘ್ರವೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಶುರುವಾಗುವ ಶುಭ ಸುದ್ದಿ ರೈಲ್ವೆ ಪ್ರಯಾಣಿಕರ ಖುಷಿಗೆ ಕಾರಣವಾಗಿದೆ.

ತಿರುವನಂತಪುರಂ-ಮಂಗಳೂರು ಮಾರ್ಗ ಮತ್ತು ಇತರ ಅನೇಕ ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲನ್ನು ಓಡಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತಿರುವನಂತಪುರಂ-ಬೆಂಗಳೂರು ಮತ್ತು ಕನ್ಯಾಕುಮಾರಿ-ಶ್ರೀನಗರದಂತಹ ಹೊಸ ಮಾರ್ಗಗಳಲ್ಲಿ ಇದನ್ನು ಓಡಿಸಲು ಸರ್ಕಾರ ಯೋಜಿಸುತ್ತಿದೆ. ಅಂದರೆ, ಶೀಘ್ರದ...