ಭಾರತ, ಏಪ್ರಿಲ್ 21 -- ರ್ಯಾಪರ್‌ ಆಗಿ ಸದ್ದು ಮಾಡಿ, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡು, ಬಿಗ್‌ ಬಾಸ್ ವಿಜೇತರಾಗಿ ಕರುನಾಡಿನ ಜನರ ಮನಗೆದ್ದವರು ಚಂದನ್‌ ಶೆಟ್ಟಿ. ಇದೆಲ್ಲದರ ನಡುವೆ ನಾಯಕನಾಗಿಯೂ ಅದೃಷ್ಟಪರೀಕ್ಷೆ ಇಳಿದಿದ್ದಾರೆ ಚಂದನ್‌. ಅದರಂತೆ, ಈದೀಗ ʻಸೂತ್ರಧಾರಿʼ ಹೆಸರಿನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಪ್ರಚಾರ ಕಣಕ್ಕಿಳಿದಿರುವ ಚಿತ್ರತಂಡ, ಇದೇ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ ಮೇ 9ರಂದು ಸಿನಿಮಾ ತೆರೆಗೆ ಬರುವುದಾಗಿಯೂ ಅಧಿಕೃತ ಘೋಷಣೆ ಮಾಡಿದೆ.

ಈಗಲ್ ಮೀಡಿಯಾ ಕ್ರಿಯೇಷನ್ಸ್‌ನ ನವರಸನ್ ನಿರ್ಮಾಣದ ಸಿನಿಮಾ ಸೂತ್ರಧಾರಿ. ಇದೇ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಬಿಡುಗಡೆಯಾಯಿತು. ವಿಜಯ್ ಈಶ್ವರ್ ಬರೆದಿರುವ ʻಸೂತ್ರಧಾರಿʼ ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೇ ಹಾಡಿದ್ದಾರೆ. ಸಂಗೀತವನ್ನೂ ಸಂಯೋಜಿಸಿದ್ದಾರೆ. A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ...