Bengaluru, ಏಪ್ರಿಲ್ 4 -- ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನಹಣ್ಣಿನ ಸುಮಾರು 1500 ಪ್ರಭೇದಗಳು ಭಾರತದಲ್ಲಿದ್ದು, ಎಲ್ಲಾ ಪ್ರಭೇದವು ವಿಭಿನ್ನ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿದೆ. ಇದರಿಂದಲೇ ನಮ್ಮ ದೇಶ ಮಾವಿನನಾಡು ಎಂಬ ಹೆಗ್ಗಳಿಕೆ ಗಳಿಸಿದೆ. ಗುಲಾಬಿ ಕೆಂಪಿನ ಗುಲಾಬ್ ಖಾಸ್ ಅಥವಾ ಸಿಂಧೂರ, ಗಿಳಿ ಕೊಕ್ಕಿನ ಆಕಾರದ ತೋತಾಪುರಿ ಹೀಗೆ ವಿಶಿಷ್ಟ ಪ್ರಭೇದದ ಮಾವಿನಹಣ್ಣುಗಳು ಭಾರತೀಯ ಮಾರುಕಟ್ಟೆಗಳನ್ನು ಆಳುತ್ತಿವೆ.

ಅಲ್ಲದೆ, ಏಪ್ರಿಲ್ ಮಧ್ಯಭಾಗದಿಂದ ಆಗಸ್ಟ್‌ವರೆಗೆ ಸುಮಾರು 300 ಗ್ರಾಂನ ರತ್ನಗಿರಿ ಅಲ್ಫೋನ್ಸೊ ಮತ್ತು ವಿಶಿಷ್ಟ ಪರಿಮಳ ಹೊಂದಿರುವ ಬಿಹಾರದ ಮಾಲ್ಡಾ ಪ್ರಭೇದದ ಮಾವಿನ ಹಣ್ಣುಗಳು ಸೇರಿದಂತೆ ವಿವಿಧ ಮಾವಿನ ಹಣ್ಣುಗಳದ್ದೇ ದರ್ಬಾರ್. ಇಲ್ಲಿ 15 ವಿಧದ ಮಾವಿನ ಹಣ್ಣಿನ ಪ್ರಭೇದಗಳು ಮತ್ತು ಅವುಗಳ ವೈಶಿಷ್ಟ್ಯ ಬಗ್ಗೆ ವಿವರಿಸಲಾಗಿದೆ.

ತೋತಾಪುರಿ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದ ಈ ತಳಿಯು ಬೇರೆ ಮಾವಿನ ಹಣ್ಣಿನಂತೆ ಸಿಹಿಯಾಗಿಲ್ಲದಿದ್ದರೂ, ಇದನ್ನು ಸಲಾಡ್ ಮತ್ತು ಉಪ್ಪಿನಕಾಯಿ ಹಾ...