ಭಾರತ, ಮೇ 14 -- ವಿಶ್ವಶ್ರೇಷ್ಠ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪುತ್ರ ಕ್ರಿಸ್ಟಿಯಾನೊ ಡಾಸ್ ಸ್ಯಾಂಟೋಸ್ ಫುಟ್ಬಾಲ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್​ನ ಅಂಡರ್ -15 ತಂಡದಲ್ಲಿ ಅವಕಾಶ ಪಡೆಯುವ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.

ವ್ಲಾಟ್ಕೊ ಮಾರ್ಕೊವಿಕ್ ಇಂಟರ್​​ನ್ಯಾಷನಲ್​ ಟೂರ್ನಮೆಂಟ್​ನಲ್ಲಿ ಜಪಾನ್ ವಿರುದ್ಧದ ಪಂದ್ಯದಲ್ಲಿ ಜೂನಿಯರ್ ಕ್ರಿಸ್ಟಿಯಾನೊ ಪೋರ್ಚುಗಲ್​​ನ 15 ವರ್ಷದೊಳಗಿನ ತಂಡಕ್ಕೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಪೋರ್ಚುಗಲ್ 4-1 ಗೋಲುಗಳಿಂದ ಗೆದ್ದು ಬೀಗಿತು.

ಜಪಾನ್ ವಿರುದ್ಧದ ಪಂದ್ಯದ 54ನೇ ನಿಮಿಷದಲ್ಲಿ ಕ್ರಿಸ್ಟಿಯಾನೊ ಡಾಸ್ ಸ್ಯಾಂಟೋಸ್ ಫಾರ್ವರ್ಡ್ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದರು. 14 ವರ್ಷದ ಜೂನಿಯರ್ ಕ್ರಿಸ್ಟಿಯಾನೊ ಈಗಾಗಲೇ ಜೂನಿಯರ್ ಮಟ್ಟದಲ್ಲಿ ಮಿಂಚಿದ್ದಾರೆ.

ತನ್ನ ಮೊಮ್ಮಗ ಜೂನಿಯರ್ ರೊನಾಲ್ಡೊ ಪೋರ್ಚುಗಲ್ನ ಅಂಡರ್-15 ತಂಡಕ್ಕೆ ಪ್ರವೇಶಿಸಿದ್ದಕ್ಕೆ ಅಜ್ಜಿ ಮಾರಿಯಾ ಅವರು ಭಾವುಕರಾಗಿದ್ದಾರೆ. ಪಂದ್ಯದ ನಂತರ ಅವರು ಮೊಮ್ಮಗನಿಗೆ ಮುತ್ತಿಟ...