Bandipur, ಏಪ್ರಿಲ್ 6 -- ಗುಂಡ್ಲುಪೇಟೆ: ವನ್ಯಜೀವಿಗಳ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್‌ ನೀಡಿದ ಆದೇಶದನ್ವಯ ದಶಕಕ್ಕೂ ಹೆಚ್ಚು ಕಾಲದಿಂದ ಬಂಡೀಪುರದಿಂದ ತಮಿಳುನಾಡಿನ ಊಟಿ, ಕೇರಳದ ವಯನಾಡು ಭಾಗಕ್ಕೆ ರಾತ್ರಿ ವಾಹನ ಸಂಚಾರ ನಿಷೇಧವಿದ್ದರೂ ಅದನ್ನು ತೆರವುಗೊಳಿಸುವ ಪ್ರಯತ್ನಗಳು ಸದ್ದಿಲ್ಲದೇ ಮತ್ತೆ ನಡೆದಿವೆ. ಅದರಲ್ಲು ಮೂರ್ನಾಲ್ಕು ತಿಂಗಳ ಹಿಂದೆ ಕೇರಳದ ವಯನಾಡು ಸಂಸದರಾದ ಪ್ರಿಯಾಂಕ ಗಾಂಧಿ ವಾದ್ರಾ ಅವರು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾತ್ರಿ ನಿಷೇಧ ತೆರವು ಮಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಕರ್ನಾಟಕ ಅರಣ್ಯ ಸಚಿವರಾದಿಯಾಗಿ ಹಲವರು ಹೇಳಿಕೆಗಳನ್ನು ನೀಡಿದ್ದಾರೆ. ರಾತ್ರಿ ವಾಹನ ನಿಷೇಧ ತೆರವು ವನ್ಯಜೀವಿಗಳಿಗೆ ಮರಣ ಶಾಸನ ಆಗಲಿದ್ದು. ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಬಂಡೀಪುರದಲ್ಲಿ ಭಾನುವಾರ ಭಾರೀ ಪ್ರತಿಭಟನೆ ನಡೆಯಿತು.

ಬೆಂಗಳೂರು, ಮೈಸೂರು, ಚಾಮರಾಜನಗರ, ಗುಂಡ್ಲುಪೇಟೆ ಅಲ್ಲದೇ ಕೇರಳ ಭಾಗದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ...